ದೇಶಾದ್ಯಂತ ಏಕರೂಪ ಪಠ್ಯಕ್ರಮ ಜಾರಿಗೆ ತರುವ ಯೋಜನೆಯಿಲ್ಲ: ಕೇಂದ್ರ ಸಚಿವಾಲಯ

: ಸಿಬಿಎಸ್ ಇ, ಐಸಿಎಸ್ ಇ ಮತ್ತು ರಾಜ್ಯ ಸರ್ಕಾರಗಳ ಪಠ್ಯಕ್ರಮಗಳಲ್ಲಿ ಏಕರೂಪ ಪಠ್ಯಕ್ರಮ ಜಾರಿಗೆ ...
ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಉಪೇಂದ್ರ ಕುಶ್ವಾಹ
ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಉಪೇಂದ್ರ ಕುಶ್ವಾಹ

ನವದೆಹಲಿ: ಸಿಬಿಎಸ್ ಇ, ಐಸಿಎಸ್ ಇ ಮತ್ತು ರಾಜ್ಯ ಸರ್ಕಾರಗಳ ಪಠ್ಯಕ್ರಮಗಳಲ್ಲಿ ಏಕರೂಪ ಪಠ್ಯಕ್ರಮ ಜಾರಿಗೆ ತರುವ ಸಾಧ್ಯತೆಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ತಳ್ಳಿಹಾಕಿದೆ. ದೇಶಾದ್ಯಂತ ಒಂದೇ ರೀತಿಯ ಪಠ್ಯಕ್ರಮ ಜಾರಿಗೆ ತಂದರೆ ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ಪರಿಚಯವಾಗುವುದಿಲ್ಲ ಎಂದು ಹೇಳಿದೆ.

ರಾಷ್ಟ್ರೀಯ ಮುಕ್ತ ಶಾಲೆಗಳನ್ನು ಮುಚ್ಚುವ ಯಾವುದೇ ಯೋಜನೆಯಿಲ್ಲ ಎಂದು ಕೂಡ ಹೇಳಿದೆ.

ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ರಾಜ್ಯ ಸಚಿವ ಉಪೇಂದ್ರ ಕುಶ್ವಾಹ ಲೋಕಸಭೆಯಲ್ಲಿಂದು ಲಿಖಿತ ಪ್ರಶ್ನೆಗೆ ಉತ್ತರಿಸಿ, ಸಿಬಿಎಸ್ಇ, ರಾಜ್ಯ ಶಿಕ್ಷಣ ಮಂಡಳಿ, ಎನ್ಐಒಎಸ್ ಮತ್ತು ಐಸಿಎಸ್ಇಗಳಲ್ಲಿ ಸಾಮಾನ್ಯ ಒಂದೇ ಪಠ್ಯಕ್ರಮ ಜಾರಿಗೆ ತರುವ ಯಾವುದೇ ಯೋಜನೆಯಿಲ್ಲ ಎಂದು ಹೇಳಿದ್ದಾರೆ.

ಪಠ್ಯಕ್ರಮ ಮತ್ತು ಶೈಕ್ಷಣಿಕ ಸಂಪನ್ಮೂಲಗಳ ಗುಣಾತ್ಮಕತೆ ಅಪೇಕ್ಷಣೀಯವಾಗಿದ್ದು, ದೇಶಾದ್ಯಂತ ಒಂದೇ ರೀತಿಯ ಪಠ್ಯಕ್ರಮ ಜಾರಿಗೆ ತಂದರೆ ಸ್ಥಳೀಯ ಭಾಷೆ, ಸಂಸ್ಕೃತಿಗಳನ್ನು ಪರಿಗಣನೆಗೆ ತೆಗೆದುಕೊಂಡಂತಾಗುವುದಿಲ್ಲ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com