ಛತ್ತೀಸ್‏ಗಢ: ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿಗೆ 9 ಸಿಆರ್‏ಪಿಎಫ್ ಸಿಬ್ಬಂದಿ ಹುತಾತ್ಮ

ಛತ್ತೀಸ್‏ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿಯಲ್ಲಿ ಒಂಭತ್ತು ಸಿಆರ್‏ಪಿಎಫ್ ಯೋಧರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಛತ್ತೀಸ್‏ಗಢ: ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿಗೆ 8 ಸಿಆರ್‏ಪಿಎಫ್ ಸಿಬ್ಬಂದಿ ಹುತಾತ್ಮ
ಛತ್ತೀಸ್‏ಗಢ: ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿಗೆ 8 ಸಿಆರ್‏ಪಿಎಫ್ ಸಿಬ್ಬಂದಿ ಹುತಾತ್ಮ
ನವದೆಹಲಿ: ಛತ್ತೀಸ್‏ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿಯಲ್ಲಿ ಒಂಭತ್ತು ಸಿಆರ್‏ಪಿಎಫ್  ಯೋಧರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಘಟನೆಯಲ್ಲಿ ಕೆಲವು ಯೋಧರು ಗಾಯಗೊಂಡಿದ್ದಾರೆಂದು ವರದಿಯಾಗಿದ್ದು ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ
ಕಳೆದ ಆರು ತಿಂಗಳ ಹಿಂದೆ ಮಾವೋವಾದಿ ನಕ್ಸಲರುನಡೆಸಿದ್ದ ಮಾರಣಾಂತಿಕ ದಾಳಿಯಲ್ಲಿ 25 ಸಿಆರ್‏ಪಿಎಫ್  ಜವಾನರು ಸಾವನ್ನಪ್ಪಿದ್ದರು. ಇದೀಗ ಮತ್ತೆ ಅದೇ ರೀತಿಯ ದಾಳಿ ನಡೆದಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಸುಕ್ಮಾ ಜಿಲ್ಲೆಯ ನಕ್ಸಲ್ ಪ್ರಾಬಲ್ಯದ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ಕಾಮಗಾರಿ ಸುರಕ್ಷ್ತಾ ದೃಷ್ಟಿಯಿಂದ ಯೋಧರನ್ನು ನೇಮಕ ಮಾಡಲಾಗಿತ್ತು. ಆಗ 300-400 ಎಡಪಂಥೀಯ ದಂಗೆಕೋರರು ದಾಳಿ ನಡೆಸಿದ್ದು ಸಿಆರ್‏ಪಿಎಫ್  ಯೋಧರನ್ನು ಕೊಂದು ಹಾಕಿದ್ದರು.
ಇದೇ ಅಲ್ಲದೆ ಕಳೆದ ಮಾರ್ಚ್ ನಲ್ಲಿ ಸಹ ಸುಕ್ಮಾ ಜಿಲ್ಲೆಯಲ್ಲಿ 12 ಸಿಆರ್‏ಪಿಎಫ್  ಯೋಧರು ನಕ್ಸಲ್ ದಾಳಿಗೆ ತುತ್ತಾಗಿದ್ದರು.
ಇಷ್ಟಾಗಿಯೂ ನಕ್ಸಲ್ ಹಾಗೂ ಯೋಧರ ನಡುವಿನ ಸಂಘರ್ಷಗಳಲ್ಲಿ ಯೋಧರು ಸಾಕಷ್ಟು ಯಶ ಕಂಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಛತ್ತೀಸ್‏ಗಢದಲ್ಲಿ ನಡೆದ ಪ್ರತ್ಯೇಕ ಎನ್ ಕೌಂಟರ್ ಪ್ರಕರಣಗಳಲ್ಲಿ 300 ಕ್ಕೂ ಅಧಿಕ ನಕ್ಸಲರನ್ನು ಕೊಲ್ಲಲಾಗಿದೆ ಎಂದು ಮಧ್ಯ ಪ್ರದೇಶ ಗೃಹ ಸಚಿವ ರಾಮ್ ಸೇವಕ್ ಪೈಕ್ರಾ ಇತ್ತೀಚೆಗಷ್ಟೆ ವಿಧಾನಸಭೆಯಲ್ಲಿ ತಿ:ಳಿಸಿದ್ದರು.
ಮಾವೋವಾದಿಗಳ ಹಿಡಿತದಲ್ಲಿರುವ ಛತ್ತೀಸ್‏ಗಢದ ಅಬುಜ್ಮಾದ್ ಅರಣ್ಯ ಪ್ರದೇಶದಲ್ಲಿ ಸಿಆರ್‏ಪಿಎಫ್  ಪಡೆ ಮೂರು ಶಾಶ್ವತ ಶಿಬಿರಗಳನ್ನು ಈ ತಿಂಗಳ  ಪ್ರಾರಂಭದಲ್ಲಿ\ ಸ್ಥಾಪಿಸಲಾಗಿತ್ತು. ಹೀಗೆ ಸ್ಥಾಪಿತವಾದ ಪ್ರತಿ ಕ್ಯಾಂಪ್ ಗಳಲ್ಲಿ ಕನಿಷ್ಟ ನೂರು ಸಿಬ್ಬಂದಿಗಳಿರುತ್ತಿದ್ದರು.
ನಕ್ಸಲ್ ಕಾರ್ಯಾಚರಣೆ ತಡೆಗಟ್ಟುವ ಸಲುವಾಗಿ ಸಿಆರ್‏ಪಿಎಫ್  ಹಾಗೂ ಇತರೆ ಭದ್ರತಾ ಪಡೆಗಳು ನಡೆಸುವ ’ಆಪರೇಷನ್ ಮಾಧ್’ ನ ಭಾಗವಾಗಿ ಈ ಶಿಬಿರಗಳನ್ನು ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com