ನಕ್ಸಲ್ ದಾಳಿ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಂತಾಪ, ಮುಖ್ಯಮಂತ್ರಿ ರಮಣ್ ಸಿಂಗ್ ಖಂಡನೆ

ಛತ್ತೀಸ್‏ಗಢದಲ್ಲಿ ನಕ್ಸಲರು ನಡೆಸಿದ ಭೀಕರ ಸ್ಪೋಟದಲ್ಲಿ ಒಂಭತ್ತು ಸಿಆರ್‏ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.
ನಕ್ಸಲ್ ದಾಳಿ: ಕೇಂದ್ರ  ಗೃಹ ಸಚಿವ ರಾಜನಾಥ್ ಸಿಂಗ್ ಸಂತಾಪ, ಮುಖ್ಯಮಂತ್ರಿ ರಮಣ್ ಸಿಂಗ್ ಖಂಡನೆ
ನಕ್ಸಲ್ ದಾಳಿ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಂತಾಪ, ಮುಖ್ಯಮಂತ್ರಿ ರಮಣ್ ಸಿಂಗ್ ಖಂಡನೆ
Updated on
ನವದೆಹಲಿ: ಛತ್ತೀಸ್‏ಗಢದಲ್ಲಿ ನಕ್ಸಲರು ನಡೆಸಿದ ಭೀಕರ ಸ್ಪೋಟದಲ್ಲಿ ಒಂಭತ್ತು ಸಿಆರ್‏ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆ ಸಂಬಂಧ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ದುಃಖ ವ್ಯಕ್ತಪಡಿಸಿದ್ದಾರೆ.
ಛತ್ತೀಸ್‏ಗಢದ ಸುಕ್ಮಾ ಜಿಲ್ಲೆಯಲ್ಲಿ ಮಾವೋವಾದಿಗಳು ನಡೆಸಿದ ಐಎಡಿ ಸ್ಫೋಟದಲ್ಲಿ ಸಿಆರ್‏ಪಿಎಫ್  212 ಬೆಟಾಲಿಯನ್ ಗೆ ಸೇರಿದ ಒಂಭತ್ತು ಮಂದಿ ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ.
"ಸುಕ್ಮಾ ಸ್ಫೋಟದಲ್ಲಿ ತಮ್ಮ ಜೀವವನ್ನು ಕಳೆದುಕೊಂಡ ಯೋಧರ ಕುಟುಂಬಗಳಿಗೆ ನನ್ನ ಸಂತಾಪವಿದೆ.ಹಾಗೆಯೇ ಗಾಯಗೊಂಡಿರುವ ಯೋಧರು ಶೀಘ್ರ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಾನು ಇದಾಗಲೇ ಸಿಆರ್‏ಪಿಎಫ್ ಡಿಜಿ ಜತೆ ಮಾತನಾಡಿದ್ದೇನೆ. ಅವರಿಗೆ ಶೀಘ್ರವಾಗಿ ಛತ್ತೀಸ್‏ಗಢಕ್ಕೆ ತೆರಳುವಂತೆ ಹೇಳಿದ್ದಾಗಿ ರಾಜನಾಥ್ ಸಿಂಗ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
"ಸುಕ್ಮಾದಲ್ಲಿ ಇಂದು ಸಂಭವಿಸಿದ ಸ್ಪೋಟವು ಛತ್ತೀಸ್‏ಗಢದವನ್ನು ಸಾಕಷ್ಟು ತೊಂದರೆಗೆ ಸಿಲುಕಿಸಿದೆ. ರಾಷ್ಟ್ರಸೇವೆ ಮಾಡುವಾಗ ಹುತಾತ್ಮರಾದ ಪ್ರತಿ ಭದ್ರತಾ ಸಿಬ್ಬಂದಿಗೆ ನಾನು ತಲೆ ಬಾಗುತ್ತೇನೆ" ಸಿಂಗ್ ಇನ್ನೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ಇದೇವೇಳೆ ನಕ್ಸಲ್ ದಾಳಿಯನ್ನು ಛತ್ತೀಸ್‏ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಸಹ ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ಹೇಡಿತನದ ಕೃತ್ಯ ಎಂದು ಅವರು ಹೇಳಿದ್ದಾರೆ.
"ಸಿಆರ್‏ಪಿಎಫ್ ಸಿಬ್ಬಂದಿಗಳ ಸಾವು ದುಃಖ ತಂದಿದೆ. ಅವರ ತ್ಯಾಗವನ್ನು ನಾನೆಂದೂ ಮರೆಯುವುದಿಲ್ಲ. ಸುಕ್ಮಾ ಜಿಲ್ಲೆಯಲ್ಲಿ ನಮ್ಮ ಸರ್ಕಾರ ರಸ್ತೆಗಳು, ವಿದ್ಯುತ್, ನೀರು ಸರಬರಾಜು, ಶಿಕ್ಷಣ, ಆರೋಗ್ಯ ಹೀಗೆ ನಾನಾ ರೀತಿಯ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಇದರಿಂದ ನಕ್ಸಲ್ ಚಟುವಟಿಕೆಗೆ ಹಿನ್ನಡೆಯಾಗಿದೆ. ಇದಕ್ಕಾಗಿಯೇ ಈ ಘೋರ ದಾಳಿ ನಡೆದಿದೆ" ಎಂದು ಅವರು ಹೇಳಿದ್ದಾರೆ.
ಸುಕ್ಮಾವನ್ನು ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಿ ಮಾರ್ಪಡಿಸಲಾಗಿದ್ದು, ಇದು ನಕ್ಸಲರನ್ನು ನಿರಾಶೆಗೊಳಿಸಿದೆ ಎಂದರು

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com