ಆರು ವರ್ಷಗಳಲ್ಲಿ 1,213 ನಕಲಿ ಸಾಲ ಮಂಜೂರು ಪತ್ರ ನೀರವ್ ಮೋದಿ ಕೈಸೇರಿತ್ತು: ಅರುಣ್ ಜೇಟ್ಲಿ

ಪಿಎನ್ಬಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಮುಂಬೈನ ಪಿಎನ್ಬಿನ ಬ್ರಾಡಿ ಹೌಸ್ ಶಾಖೆ ನಿಂದ ಮಾರ್ಚ್ 10, 2011ರಂದು ಪ್ರಥಮ ಬಾರಿಗೆ ನಕಲಿ ಸಾಲಮಂಜೂರು.........
ಅರುಣ್ ಜೇಟ್ಲಿ,
ಅರುಣ್ ಜೇಟ್ಲಿ,
Updated on
ನವದೆಹಲಿ: "ಪಿಎನ್ಬಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಮುಂಬೈನ ಪಿಎನ್ಬಿನ ಬ್ರಾಡಿ ಹೌಸ್ ಶಾಖೆ ನಿಂದ ಮಾರ್ಚ್ 10, 2011ರಂದು ಪ್ರಥಮ ಬಾರಿಗೆ ನಕಲಿ ಸಾಲಮಂಜೂರು ಪತ್ರವನ್ನು ಪಡೆದಿದ್ದಾರೆ, ಇದಾದ ನಂತರದ 74 ತಿಂಗಳುಗಳಲ್ಲಿ 1,212 ಇಂತಹಾ ಪತ್ರಗಳನ್ನು ಆತ ಪಡೆದಿದ್ದರು" ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನೀರವ್ ಮೋದಿ ಒಡೆತನದ ಸಂಸ್ಥೆಗಳು ಭಾರತೀಯ ಬ್ಯಾಂಕುಗಳ ಸಾಗರೋತ್ತರ ಶಾಖೆಗಳಿಂದ ಸಾಲ ಪಡೆಯಲು ಇಂತಹಾ ನಕಲಿ ಸಾಲಮಂಜೂರು ಪತ್ರವನ್ನು ಬಳಸಿಕೊಂಡಿದ್ದವು. ದೇಶದ ಎರಡನೇ ಅತಿ ದೊಡ್ಡ ರಾಜ್ಯ ಸರ್ಕಾರ ನಿರ್ವಹಣೆಯ ಬ್ಯಾಂಕ್ ನೌಕರರ ನೆರವಿನಿಂದ ಒಂದೇ ದಿನದಲ್ಲಿ ಇಂತಹಾ 5 ನಕಲು ಪತ್ರಗಳನ್ನು ಪಡೆದುಕೊಳ್ಳುವಲ್ಲಿ ನೀರವ್ ಮೋದಿ ಯಶಸ್ವಿಯಾಗಿದ್ದರು ಎಂದು ಜೇಟ್ಲಿ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಉತ್ತರಿಸಿದ ಜೇಟ್ಲಿ ನೀರವ್ ಮೋದಿ ಕಡೆಯ ಬಾರಿಗೆ ಇಂತಹಾ ಪತ್ರವನ್ನು ಮೇ 23, 2017ರಲ್ಲಿ ಪಡೆದಿದ್ದರೆಂದು ಹೇಳಿದ್ದಾರೆ.
ಇದಲ್ಲದೆ ನೀರವ್ ಮೋದಿ ಸ್ವಾಮ್ಯದ ಸಂಸ್ಥೆಗಳಿಗೆ ಕಳೆದ ಆರು ವರ್ಷಗಲಲ್ಲಿ ಒಟ್ಟಾರೆ 53 ನಿಜವಾದ (ನಕಲಿಯಲ್ಲದ) ಸಾಲ ಮಂಜೂರು ಪತ್ರವನ್ನು ಸಹ ನೀಡಲಾಗಿದೆ. ಮಾರ್ಚ್ 5, 2011ರಂದು ಮೊದಲ ಹಾಗೂ ನವೆಂಬರ್ 6, 2017ರಂದು ಕಡೆಯ ಅಸಲಿ ಸಾಲ ಮಂಜೂರು ಪತ್ರವನ್ನು ನೀರವ್ ಮೋದಿ ಅವರ ಸಂಸ್ಥೆಗೆ  ನೀಡಲಾಗಿತ್ತು. ಇನ್ನು ನಕಲಿ ಪತ್ರಗಳು ಒಂದು ವರ್ಷದ ಅವಧಿಗೆ ಸಿಂಧುತ್ವವನ್ನು ಹೊಂದಿದ್ದವು.
ಕಳೆದ ವರ್ಷ ಫೆಬ್ರವರಿಯಲ್ಲಿ ನೀಡಿದ್ದ ಸಾಲ ಮಂಜೂರು ಪತ್ರದ ಸಂಬಂಧ ಈ ಜನವರಿವರೆಗಿನ ಪಾವತಿಯ ಪಟ್ಟಿಯನ್ನು ಅವರು ಓದಿದರು.
ಮೋದಿ ಹಾಗೂ ಆತನ ಸಂಬಂಧಿ ಮೆಹುಲ್‌ ಚೋಕ್ಸಿ ಒಡೆತನದ ಸಂಸ್ಥೆಗಳು ಪಿಎನ್ಬಿ ಗೆ 13,600  ರೂ. ವಂಚನೆ ನಡೆಸಿದೆ. ಚೋಕ್ಸಿ ಅವರ ಗೀತಾಂಜಲಿ ಗ್ರೂಪ್ 7,080.86 ಕೋಟಿ ರೂ. ವಂಚನೆ ಮಾಡಿದ್ದರೆ ಉಳಿದ ಹಣವನ್ನು ನೀರವ್ ಮೋದಿ ಸ್ವಾಮ್ಯದ ಸಂಸ್ಥೆಗಳು ಪಾವತಿಸದೆ ವಂಚಿಸಿದೆ.
ಮುಂಬೈನ ತನ್ನ ಶಾಖೆಯೊಂದರಲ್ಲಿ ಅನುಮಾನಾಸ್ಪದವಾದ ವ್ಯವಹಾರ ನಡೆದಿರುವ ಬಗೆಗೆ ಪಿಎನ್ಬಿ ಮುಖ್ಯ ಶಾಖೆಯು ಜನವರಿ 23, 2018ರಂದು ವರದಿ ಸ್ವೀಕರಿಸಿದೆ. ಈ ಸಂಬಂಧ ತುರ್ತಾಗಿ ತನಿಖಾ ತಂಡವೊಂದು ರಚನೆಗೊಂಡಿದೆ. ಈ ತಂಡವು ಜನವರಿ 25, 2018ರಂದು ತನ್ನ ಪ್ರಾಥಮಿಕ ವರದಿ ನೀಡಿದೆ. "
"ಜನವರಿ 29, 2018 (ಜನವರಿ 26 ರಿಂದ 28 ರವರೆಗೆ ಸಾರ್ವಜನಿಕ ರಜಾ ದಿನಗಳು)ರಂದು ವಂಚನೆ ಪ್ರಕರಣ ವರದಿಯು ಆರ್ ಬಿಐಗೆ ಸಿಕ್ಕಿದೆ. ಬಳಿಕ ಈ ಸಂಬಂಧ ಸಿಬಿಐಗೆ ದೂರು ಸಲ್ಲಿಸಲಾಗಿದೆ" ಜೇಟ್ಲಿ ಹೇಳಿದರು. 
ಪಿಎನ್ಬಿ ವಂಚನೆ ಪ್ರಕರಣ ಸಂಬಂಧದ ಮಾಹಿತಿಯನ್ನು  ಬ್ಯಾಂಕ್ ಫೆಬ್ರವರಿ 6ರಂದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ನೀಡಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com