ದಿ ಸೈನ್ಸ್ ಆಫ್ ಲಿಬರ್ಟಿಯ ಲೇಖಕ ತಿಮೋತಿ ಫೆರ್ರಿಸ್ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ಈ ಸಿದ್ಧಾಂತವನ್ನು ಪರಿಶೀಲನೆ ನಡೆಸುವ ವಿಧಾನ ಇಲ್ಲ, ಕಪ್ಪು ಕುಳಿಗಳ ಅಧ್ಯಯನವೇ ದೀರ್ಘಾವಧಿಯದ್ದು ಎಂದು ಹೇಳಿದ್ದಾರೆ. ನೋಬೆಲ್ ಫೌಂಡೇಶನ್ ಮರಣೋತ್ತರವಾಗಿ ಯಾರಿಗೂ ನೋಬೆಲ್ ಪ್ರಶಸ್ತಿ ನೀಡುವುದಿಲ್ಲ. ಈಗ ಸ್ಟೀಫನ್ ಹಾಕಿಂಗ್ ಇಹ ಲೋಕ ತ್ಯಜಿಸಿದ್ದು, ವಿಶ್ವ ವಿಖ್ಯಾತ ಭೌತ ವಿಜ್ಞಾನಿಯಾಗಿದ್ದರೂ ಹಾಕಿಂಗ್ ಗೆ ನೊಬೆಲ್ ಕೈತಪ್ಪಿದೆ. ಆದರೆ ವಿಜ್ಞಾನ ಕ್ಷೇತ್ರ ಹಾಗೂ ಕಪ್ಪು ಕುಳಿಗಳ ಅಧ್ಯಯನಕ್ಕೆ ಅವರ ಕೊಡುಗೆ ಅನನ್ಯವಾದದ್ದು.