ಅಯೋಧ್ಯಾ ವಿವಾದದಲ್ಲಿ ಹಸ್ತಕ್ಷೇಪಕ್ಕೆ ಅವಕಾಶ ಕೋರಿದ್ದ ಎಲ್ಲಾ ಮಧ್ಯಂತರ ಮನವಿಗಳ ವಜಾ

ಅಯೋಧ್ಯೆ ರಾಮಮಂದಿರ ವಿವಾದಕ್ಕೆ ಸಂಬಂಧಿಸಿ ಸಲ್ಲಿಕೆಯಾದ ಸುಮಾರು 32 ಮಧ್ಯಂತರ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಅಯೋಧ್ಯಾ ವಿವಾದದಲ್ಲಿ ಹಸ್ತಕ್ಷೇಪಕ್ಕೆ ಅವಕಾಶ ಕೋರಿದ್ದ ಎಲ್ಲಾ ಮಧ್ಯಂತರ ಮನವಿಗಳ ವಜಾ,
ಅಯೋಧ್ಯಾ ವಿವಾದದಲ್ಲಿ ಹಸ್ತಕ್ಷೇಪಕ್ಕೆ ಅವಕಾಶ ಕೋರಿದ್ದ ಎಲ್ಲಾ ಮಧ್ಯಂತರ ಮನವಿಗಳ ವಜಾ,
ನವದೆಹಲಿ: ಅಯೋಧ್ಯೆ ರಾಮಮಂದಿರ ವಿವಾದಕ್ಕೆ ಸಂಬಂಧಿಸಿ ಸಲ್ಲಿಕೆಯಾದ ಸುಮಾರು 32 ಮಧ್ಯಂತರ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ , ಎಸ್. ಎ. ನಜೀಬ್ ಅವರನ್ನೊಳಗೊಂಡ ಪೀಠ ವಿಚಾರಣೆಯನ್ನು ನಡೆಸಿದ್ದು ವಿವಾದಕ್ಕೆ ಸಂಬಂಧಿಸಿ ಮೂಲ ಪಕ್ಷಗಳು  ಮಾತ್ರವೇ ವಾದ ಮಂಡಿಸಲು ಅವಕಾಶ ನೀಡಲಾಗುತ್ತದೆ. ವಿವಾದಕ್ಕೆ ಸಂಬಂಧಿಸಿಲ್ಲದ, ವ್ಯಕ್ತಿಗಳ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ ಎಂದಿದೆ.
ಪ್ರಸ್ತುತ ನಡೆಯುತ್ತಿರುವ ವಿಚಾರಣೆಯಲ್ಲಿ ಮಧ್ಯ ಪ್ರವೇಶ ಕೋರಿ ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಸಹ ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದೆ. ಆದರೆ ವಿವಾದಿತ ಸ್ಥಳದಲ್ಲಿ ರಾಮನ ಪೂಜೆಗೆ ಅವಕಾಶ ನೀಡುವಂತೆ ಕೋರಿದ್ದ ಸ್ವಾಮಿ ಅವರ ರಿಟ್ ಅರ್ಜಿಯನ್ನು ವಿಲೇವಾರಿ ಮಾಡಲು ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ.
"ಅಯೋಧೆಯಲ್ಲಿ ರಾಮನ ಪೂಜೆ ಮಾಡಲು ನನಗೆ ಮೂಲಭೂತ ಹಕ್ಕಿದೆ ಎನ್ನುವ ರಿಟ್ ಅರ್ಜಿಯನ್ನು ನಾನು ನ್ಯಾಯಾಲಯಕ್ಕೆ ಸಲ್ಲಿಸಿದ್ದು ಇದು ಆಸ್ತಿ ಹಕ್ಕಿನ ಮನವಿಗಿಂತಲೂ ಹೆಚ್ಚಿನ ಮೌಲ್ಯ ಹೊಂದಿದೆ" ಸ್ವಾಮಿ ಹೇಳಿದ್ದಾರೆ.
ಪ್ರಖ್ಯಾತ ಶ್ಯಾಮ್‌ ಬೆನಗಲ್‌, ಅಪರ್ಣಾ ಸೇನ್‌ ಮತ್ತು ತೀಸ್ತಾ ಸೆಟಲ್‌ವಾಡ್‌ ಸಲ್ಲಿಸಿರುವ ಮಧ್ಯಂತರ ಅರ್ಜಿಗಳೂ ಸಹ ಸರ್ವೋಚ್ಚ ನ್ಯಾಯಾಲಯದಿಂದ ಇಂದು ವಜಾಗೊಂಡ ಅರ್ಜಿಗಳಲ್ಲಿ ಸೇರಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com