ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ

ಬಿಜೆಪಿ, ಕಾಂಗ್ರೆಸ್ ನ ಸಂಸದೀಯ ಬಲ 2019 ರಲ್ಲಿ ಬದಲಾಗಲಿದೆ: ಶಿವಸೇನೆ

2019ರ ಲೋಕಸಭೆ ಚುನಾವಣೆಯಲ್ಲಿ ಸಂಸತ್ತಿನ ಲೆಕ್ಕಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಬದಲಾವಣೆ...

ಮುಂಬೈ: 2019ರ ಲೋಕಸಭೆ ಚುನಾವಣೆಯಲ್ಲಿ ಸಂಸತ್ತಿನ ಲೆಕ್ಕಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಬದಲಾವಣೆ ಉಂಟಾಗಬಹುದು ಎಂದು ಊಹಿಸಿರುವ ಶಿವಸೇನೆ ಉತ್ತರ ಪ್ರದೇಶ ಮತ್ತು ಬಿಹಾರ ಉಪ ಚುನಾವಣೆಗಳ ಫಲಿತಾಂಶ ವಿರೋಧ ಪಕ್ಷಗಳಿಗೆ ಹೆಚ್ಚಿನ ಉತ್ತೇಜನ ನೀಡಲಿದೆ ಎಂದು ಹೇಳಿದ್ದಾರೆ.

ಆದರೆ ವಿರೋಧ ಪಕ್ಷದಲ್ಲಿ ಆಡಳಿತ ಪಕ್ಷವನ್ನು ಸೋಲಿಸುವಂತಹ ಅಸಾಧಾರಣ ನಾಯಕತ್ವವಿಲ್ಲ ಎಂದು ಹೇಳಿದೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿನ ಜೊತೆಗೆ ಹೋರಾಡಬೇಕಿದೆ ಎಂದು ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ. 2019ರ ಸಾಮಾನ್ಯ ಚುನಾವಣೆಗೆ ಮೊದಲು ಬಿಜೆಪಿಗೆ ಆಘಾತವುಂಟುಮಾಡುವ ರೀತಿಯಲ್ಲಿ ಉತ್ತರ ಪ್ರದೇಶದ ಗೋರಕ್ ಪುರ ಮತ್ತು ಫುಲ್ಪುರ್ ಮತ್ತು ಬಿಹಾರದ ಅರಾರಿಯಾ ಲೋಕಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಬಂದಿದೆ. ಈ ಫಲಿತಾಂಶ ವಿರೋಧ ಪಕ್ಷಗಳಿಗೆ ಹೆಚ್ಚಿನ ಉತ್ತೇಜನ ನೀಡಲಿದ್ದು ದೇಶದ ಜನತೆ ತಮ್ಮ ಭ್ರಮಾ ಲೋಕದಿಂದ ಹೊರಬರುತ್ತಿದ್ದಾರೆ ಎಂದು ಗೊತ್ತಾಗುತ್ತಿದೆ ಎಂದು ಸಾಮ್ನಾದಲ್ಲಿ ಬರೆದುಕೊಂಡಿದೆ.

ತಾವು ಮೋಸ ಹೋಗಿದ್ದೇವೆ ಎಂದು ಜನರಿಗೆ ಗೊತ್ತಾಗುತ್ತಿದೆ. ಆದರೆ ಜನರಲ್ಲಿನ ಹತಾಶೆ, ಗೊಂದಲಗಳನ್ನು ಬಳಸಿಕೊಂಡು ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವಂತಹ ಪ್ರಬಲ ನಾಯಕತ್ವ ವಿರೋಧ ಪಕ್ಷಗಳಲ್ಲಿಲ್ಲ. ಶಿವಸೇನೆ ಕೇಂದ್ರ ಮತ್ತು ಮಹಾರಾಷ್ಟ್ರಗಳಲ್ಲಿ ಬಿಜೆಪಿ ಜೊತೆ ಮೈತ್ರಿಯನ್ನು ಹೊಂದಿದೆ.

ಆದರೆ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಸಂಸತ್ತಿನಲ್ಲಿ ಬಿಜೆಪಿ ಸದಸ್ಯರ ಬಲ ಕುಗ್ಗಲಿದೆ. ಮೋದಿ-ಶಾ ನೇತೃತ್ವದ ಬಿಜೆಪಿ ಲೋಕಸಭೆಯಲ್ಲಿ 280 ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್ ನಲ್ಲಿ 50 ಮಂದಿ ಸದಸ್ಯರು ಕೂಡ ಇಲ್ಲ. ಬೇರೆಲ್ಲಾ ವಿರೋಧ ಪಕ್ಷಗಳನ್ನು ಸೇರಿಸಿದರೆ ಸಂಸತ್ತಿನಲ್ಲಿ ಅವರ ಸಂಖ್ಯೆ 150 ಕೂಡ ಆಗುವುದಿಲ್ಲ. ಇದು 2014ರ ಪರಿಸ್ಥಿತಿ. ಆದರೆ ಇದೇ ಪರಿಸ್ಥಿತಿ 2019ರಲ್ಲಿ ಇರುವುದಿಲ್ಲ, ಖಂಡಿತಾ ಬದಲಾವಣೆಯಾಗುತ್ತದೆ ಎಂದು ಸಾಮ್ನಾದಲ್ಲಿ ವಿವರಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com