ಬೋಯಿಂಗ್ ಫೈಟರ್ ಜೆಟ್ ಗಳನ್ನು ಖರೀದಿಸಲು ಭಾರತ ಉತ್ಸುಕ

ಭಾರತೀಯ ನೌಕಾಪಡೆಗೆ ಹೊಸ ಫೈಟರ್ ಜೆಟ್ ಗಳನ್ನು ಪೂರೈಕೆ ಮಾಡುವುದಕ್ಕೆ ಮುಂಚೂಣಿಯಲ್ಲಿರುವ ಬೋಯಿಂಗ್ ಸಂಸ್ಥೆ ಈಗ 15 ಬಿಲಿಯನ್ ಡಾಲರ್ ಮೊತ್ತದ ಮತ್ತೊಂದು ಯೋಜನೆಗೂ ರೇಸ್ ನಲ್ಲಿದೆ.
ಬೋಯಿಂಗ್
ಬೋಯಿಂಗ್
ನವದೆಹಲಿ: ಭಾರತೀಯ ನೌಕಾಪಡೆಗೆ ಹೊಸ ಫೈಟರ್ ಜೆಟ್ ಗಳನ್ನು ಪೂರೈಕೆ ಮಾಡುವುದಕ್ಕೆ ಮುಂಚೂಣಿಯಲ್ಲಿರುವ ಬೋಯಿಂಗ್ ಸಂಸ್ಥೆ ಈಗ 15 ಬಿಲಿಯನ್ ಡಾಲರ್ ಮೊತ್ತದ ಮತ್ತೊಂದು ಯೋಜನೆಗೂ ರೇಸ್ ನಲ್ಲಿದೆ. 
ಕೇಂದ್ರ ಸರ್ಕಾರ ವಾಯುಪಡೆಗೆ ಟ್ವಿನ್ ಇಂಜಿನ್ ವಿಮಾನಗಳನ್ನು ಪರಿಗಣಿಸುವಂತೆ ಕೇಳಿದ್ದು, ಈ ವರೆಗೂ ಲಾಕ್ಹೀಡ್ ಮಾರ್ಟಿನ್ ಕಾರ್ಪ್ನ ಎಫ್ -16 ಮತ್ತು ಸಾಬ್ ಎಬಿ ಗ್ರಿಪೆನ್ ನಡುವೆ ಪೈಪೋಟಿ ನಡೆದಿತ್ತು. ಈ ಎರಡೂ ಸಂಸ್ಥೆಗಳು ಸ್ಥಳೀಯ ಸಂಸ್ಥೆಗಳೊಂದಿಗೆ ಕೈ ಜೋಡಿಸುವ ಮೂಲಕ 100 ಸಿಂಗಲ್ ಇಂಜಿನ್ ಜೆಟ್ ಗಳನ್ನು ನಿರ್ಮಿಸುವುದಾಗಿ ಹೇಳಿತ್ತು.  ಈಗ ಲಾಕ್ಹೀಡ್ ಮಾರ್ಟಿನ್ ಕಾರ್ಪ್ ಹಾಗೂ ಸಾಬ್ ಎಬಿ ಜೊತೆಗೆ ಬೋಯಿಂಗ್ ಸಹ ಭಾರತಕ್ಕೆ ಫೈಟರ್ ಜೆಟ್ ಗಳನ್ನು ಪೂರೈಕೆ ಮಾಡುವುದಕ್ಕೆ ಉತ್ಸಾಹ ತೋರಿದೆ. 
ಜೆಟ್ ಪೂರೈಕೆ ಸಂಸ್ಥೆಗಳು ಭಾರತದ ಸ್ಥಳೀಯ ಸಂಸ್ಥೆಗಳೊಂದಿಗೆ ಕೈಜೋಡಿಸುವುದರಿಂದ ಮೇಕ್ ಇನ್ ಇಂಡಿಯಾಗೂ ಸಹಕಾರಿಯಾಗಲಿದ್ದು, ಶಸ್ತ್ರಾಸ್ತ್ರ ಆಮದಿನಲ್ಲಿ ಗಣನೀಯ ಪ್ರಮಾಣಾದ ಇಳಿಕೆಯಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಹ ಮಹತ್ವದ ನಿರ್ಧಾರ ಕೈಗೊಂಡಿದ್ದು ಭಾರತೀಯ ವಾಯುಪಡೆಗೆ ಟ್ವಿನ್ ಇಂಜಿನ್ ವಿಮಾನ, ಬೋಯಿಂಗ್ ನ ಎಫ್/ಎ 18 ಸೂಪರ್ ಹಾರ್ನೆಟ್ ವಿಮಾನವನ್ನೂ ಪರಿಗಣಿಸುವಂತೆ ಸೂಚನೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com