ಜಯಾ ನಿವಾಸ ಸ್ಮಾರಕವಾಗಿ ಪರಿವರ್ತಿಸಲು 20 ಕೋಟಿ ರು. ಅನುದಾನ

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರು ವಾಸವಿದ್ದ ಪೋಯಸ್‌ ಗಾರ್ಡನ್ ನ 'ವೇದಾ ನಿಲಯಂ'....
ದಿ.ಜಯಲಲಿತಾ ಭಾವಚಿತ್ರ
ದಿ.ಜಯಲಲಿತಾ ಭಾವಚಿತ್ರ
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರು ವಾಸವಿದ್ದ ಪೋಯಸ್‌ ಗಾರ್ಡನ್ ನ 'ವೇದಾ ನಿಲಯಂ' ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸಲು ತಮಿಳುನಾಡು ಸರ್ಕಾರ 2018ನೇ ಸಾಲಿನ ಬಜೆಟ್ ನಲ್ಲಿ 20 ಕೋಟಿ ರುಪಾಯಿ ಅನುದಾನ ನೀಡಿದೆ.
ಜಯಲಲಿತಾ ಅವರ ನಿವಾಸ ಸ್ಮಾರಕವಾಗಿ ಪರಿವರ್ತಿಸಲು 20 ಕೋಟಿ ರುಪಾಯಿ ಹಾಗೂ ಮರಿನಾ ಬೀಚ್ ನಲ್ಲಿನ ಭವ್ಯ ಸ್ಮಾರಕಕ್ಕೆ 50.80 ಕೋಟಿ ರುಪಾಯಿ ನೀಡಲಾಗಿದೆ ಎಂದು ತಮಿಳುನಾಡು ಉಪ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಅವರು ಬಜೆಟ್ ನಲ್ಲಿ ಘೋಷಿಸಿದ್ದಾರೆ.
ಜಯಲಲಿತಾ ಅವರ  ಪೋಯಸ್‌ ಗಾರ್ಡನ್ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸಲು ಇತ್ತೀಚಿಗೆ ಪೂರ್ವ ಸಿದ್ಧತಾ ಕಾರ್ಯಗಳು ನಡೆದಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ.
ಜಯಲಲಿತಾ ಅವರು ಡಿಸೆಂಬರ್ 5, 2016ರಲ್ಲಿ ನಿಧನರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com