ಹೇಳಿಕೆಗೆ ಆಧಾರವನ್ನು ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಹರ್ಷವರ್ಧನ್, ನೀವು ಆಧಾರವನ್ನು ಕಂಡುಕೊಳ್ಳಿ, ಸಾಪೇಕ್ಷತಾ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ಐನ್ಸ್ಟೈನ್ ನೀಡಿರುವ ಸಿದ್ಧಾಂತಕ್ಕಿಂತ ವೇದಗಳಲ್ಲಿ ಹೆಚ್ಚು ಮೌಲ್ಯಯುತವಾದ ಸಿದ್ಧಾಂತ ಇರುವ ಸಾಧ್ಯತೆಗಳಿವೆ ಎಂದು ಸ್ಟೀಫನ್ ಹಾಕಿಂಗ್ ಹೇಳಿರುವುದು ದಾಖಲಾಗಿದೆ ನೀವೂ ಸಹ ಇದಕ್ಕೆ ಸಂಬಂಧಪಟ್ಟಂತೆ ಕೆಲಸ ಮಾಡಿ ಎಂದು ಹೇಳಿದ್ದಾರೆ.