ರಾಫೆಲ್ ಜೆಟ್ ವಿಮಾನ ಖರೀದಿ ಒಪ್ಪಂದದಿಂದ 36 ಸಾವಿರ ಕೋಟಿ ರೂ.ನಷ್ಟ-ರಾಹುಲ್ ಗಾಂಧಿ

ರಾಫೆಲ್ ಜೆಟ್ ವಿಮಾನ ಖರೀದಿಗಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಸರ್ಕಾರ 1100 ಕೋಟಿ ರೂ ಹೆಚ್ಚಿಗೆ ಪಾವತಿಸಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ ; ರಾಫೆಲ್ ಜೆಟ್ ವಿಮಾನ ಖರೀದಿಗಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಸರ್ಕಾರ 1100 ಕೋಟಿ ರೂ ಹೆಚ್ಚಿಗೆ ಹಣ ಪಾವತಿಸುವ ಮೂಲಕ 36 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ  ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಅವಧಿಯಲ್ಲಿ 570 ಕೋಟಿ ರೂಗೆ ರಾಫೆಲ್ ಜೆಟ್ ವಿಮಾನ ಖರೀದಿಸಲು ನಿರ್ಧರಿಸಲಾಗಿತ್ತು. ಆದರೆ, ನರೇಂದ್ರಮೋದಿ ನೇತೃತ್ವದ ಸರ್ಕಾರ 16570 ಕೋಟಿ ರೂ ನೀಡಿ ರಾಫೆಲ್ ಜೆಟ್ ಖರೀದಿಸಿದೆ ಎಂಬುದು ರಾಫೆಲ್ ಉತ್ಪಾದನಾ ಕಂಪನಿ ಡಾಸಾಲ್ಟ್ ನ 2016ರ ವಾರ್ಷಿಕ ವರದಿಯಿಂದ ತಿಳಿದುಬಂದಿದೆ ಎಂದಿದ್ದಾರೆ.

 ರಾಫೆಲ್ ವಿಮಾನ ಖರೀದಿಗಾಗಿ ರಕ್ಷಣಾ ಮಂತ್ರಿಯಿಂದ ಪಡೆದಿರುವ ಹಣದ ಬಗ್ಗೆ  ಡಾಸಾಲ್ಟ್ ನ 2016ರ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕ್ವಾತರ್ 1319 ಕೋಟಿ, ಮೋದಿ,1670 ಕೋಟಿ, ಮನ್ ಮೋಹನ್ ಸಿಂಗ್ 570 ಕೋಟಿ, ಪ್ರತಿ ವಿಮಾನಕ್ಕಾಗಿ 1100 ಕೋಟಿ ಹೆಚ್ಚುವರಿ ಹಣ . ಶೇಕಡ 10ರಷ್ಟು ನಮ್ಮ  ರಕ್ಷಣಾ ಬಜೆಟ್  ಜೇಬಿಗಿಳಿದಿದೆ. ಈ ಮಧ್ಯೆ ಹಣಕ್ಕಾಗಿ ನಮ್ಮ ಸೈನಿಕರು ಸರ್ಕಾರದ ಬಳಿ ಅಂಗಲಾಚುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.



36 ರಾಫೆಲ್ ಜೆಟ್ ವಿಮಾನ ಖರೀದಿಗಾಗಿ ಫ್ರಾನ್ಸ್ ಮೂಲಕ ಡಾಸಲ್ಟ್ ವಿಮಾಯಾನ ಕಂಪನಿಯೊಂದಿಗೆ ಪ್ರಧಾನಿ ನರೇಂದ್ರಮೋದಿ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ರಾಫೆಲ್ ಜೆಟ್ ವಿಮಾನ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ.

ಈ ಒಪ್ಪಂದಕ್ಕೆ ಸಂಬಂಧಿಸಿದಂತೆ  ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ನರೇಂದ್ರಮೋದಿ ರಾಹುಲ್ ಗಾಂಧಿ 8 ಪ್ರಶ್ನೆಗಳನ್ನು ಕೇಳಿದ್ದರು. ಒಪ್ಪಂದ ಬದಲಾವಣೆಗಾಗಿಯೇ ನರೇಂದ್ರಮೋದಿ ಪ್ಯಾರಿಸ್ ಗೆ ಭೇಟಿ ನೀಡಿದ್ದರು ಎಂದು ಆರೋಪಿಸಿದ್ದರು.

 ನಂತರ ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಎನ್ ಡಿ ಎಸರ್ಕಾರ ಈ ವಿಚಾರದಲ್ಲಿ ಪ್ರತಿಪಕ್ಷಗಳು ದೇಶದ ಜನರನ್ನು ಹಾದಿ ತಪ್ಪಿಸುತ್ತಿವೆ ಎಂದು ಆರೋಪಿಸಿತ್ತು. ಸಾಮರ್ಥ್ಯ, ಬೆಲೆ, ನಿರ್ವಹಣೆ ಮೊದಲಾದ ಅಂಶ ಗಮನಿಸಿ ಯುಪಿಎ  ಸರ್ಕಾರಕ್ಕಿಂತಲೂ ಸೂಕ್ತ ಕ್ರಮದಲ್ಲಿ ರಾಫೆಲ್ ಜೆಟ್ ವಿಮಾನ ಖರೀದಿಸಲಾಗಿದೆ ಎಂದು ಹೇಳಿಕೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com