2000 ನೋಟುಗಳ ರದ್ದತಿ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ನವೆಂಬರ್ 2016ರ ಅನಾಣ್ಯೀಕರಣದ ಬಳಿಕ ಪರಿಚಯಿಸಲಾದ 2,000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಪಡಿಸುವ ಪ್ರಸ್ತಾಪವಿಲ್ಲ ಎಂದು ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ನವೆಂಬರ್ 2016ರ ಅನಾಣ್ಯೀಕರಣದ ಬಳಿಕ ಪರಿಚಯಿಸಲಾದ 2,000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಪಡಿಸುವ ಪ್ರಸ್ತಾಪವಿಲ್ಲ ಎಂದು ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಕೆಲ ನಗರದಲ್ಲಿ 10 ರೂ. ಮುಖಬೆಲೆಯ ಪ್ಲ್ಯಾಸ್ಟಿಕ್ ನೋಟುಗಳನ್ನು ಪರಿಚಯಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಲೋಕಸಭೆಯಲ್ಲಿ ನಡೆದ ಕಲಾಪದಲ್ಲಿ ಹಣಕಾಸು ಸಚಿವಾಲಯ ಹೇಳಿದೆ.
"2,000 ರೂ. ಮುಖಬೆಲೆಯ ನೋಟಿನ ಮುದ್ರಣ ನಿಲ್ಲಿಸುವ ಅಥವಾ ರದ್ದುಪಡಿಸುವ ಯಾವ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ" ಎಂದು ಹಣಕಾಸು ಇಲಾಖೆ ರಾಜ್ಯ ಸಚಿವ ಪಿ. ರಾಧಾಕೃಷ್ಣನ್ ಹೇಳಿದ್ದಾರೆ. ಭವಿಷ್ಯದಲ್ಲಿ ನೋಟುಗಳನ್ನು ರದ್ದುಪಡಿಸುವ ಯಾವ್ ಪ್ರಸ್ತಾಪವನ್ನಾದರೂ ಹಣಕಾಸು ಸಚಿವಾಲಯ ಹೊಂದಿದೆಯೆ? ಎನ್ನುವ ಪ್ರಶ್ನೆಗೆ ಸಚಿವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.
ಮಹಾತ್ಮಾ ಗಾಂಧಿ (ನೂತನ) ಸರಣಿಯಲ್ಲಿ ಬಿಡುಗಡೆಯಾದ ರೂ 500 ಮತ್ತು 2,000 ರೂ ನೋಟುಗಳು ಕ್ರಮವಾಗಿ 66ಎಂಎಂ X 150ಎಂಎಂ, 66ಎಂಎಂ X 166ಎಂಎಂ ಅಳತೆಯಲ್ಲಿದೆ.
ದೇಶದ ಐದು ನಗರಗಳಲ್ಲಿ ಪ್ಲ್ಯಾಸ್ಟಿಕ್ ನೊಟುಗಳ ಪ್ರಾಯೋಗಿಕ ಚಲಾವಣೆ ಜಾರಿಮಾಡಲು ನಿರ್ಧರಿಸಿದ್ದೇವೆ. 10 ರೂಪಾಯಿಗಳ ಪ್ಲ್ಯಾಸ್ಟಿಕ್ ನೋಟುಗಳನ್ನು ಪ್ರಾರಂಭದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಕೊಚ್ಚಿ, ಮೈಸೂರು, ಜೈಪುರ, ಶಿಮ್ಲಾ ಮತ್ತು ಭುವನೇಶ್ವರದಲ್ಲಿ ಈ ನೋಟುಗಳು ಪ್ರಾಯೋಗಿಕ ಚಲಾವಣೆಗೆ ಬರಲಿದೆ. ಈ ನೋಟುಗಳನ್ನು ಆಮದು ವಸ್ತುಗಳನ್ನು ಬಳಸಿ ಬಾರತೀಯ ಮುದ್ರಣಾಲಯದಲ್ಲಿಯೇ ಮುದ್ರಣ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com