7 ಕೇಂದ್ರ ಸಚಿವರುಗಳು ರಾಜ್ಯಸಭೆಗೆ ಅವಿರೋಧ ಆಯ್ಕೆ

ಕೇಂದ್ರ ಸಚಿವರುಗಳಾದ ರವಿ ಶಂಕರ್ ಪ್ರಸಾದ್ ಮತ್ತು ಪ್ರಕಾಶ್ ಜಾವ್ಡೇಕರ್ ಸೇರಿದಂತೆ 7 ಸಚಿವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರ ಸಚಿವರುಗಳಾದ ರವಿ ಶಂಕರ್ ಪ್ರಸಾದ್ ಮತ್ತು ಪ್ರಕಾಶ್ ಜಾವ್ಡೇಕರ್ ಸೇರಿದಂತೆ 7 ಸಚಿವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
ಮಾರ್ಚ್ 23 ರಂದು  ರಾಜ್ಯಸಭೆಗೆ ಚುನಾವಣೆ ನಡೆಯಲಿದ್ದು  ಆರು ರಾಜ್ಯಗಳಿಂದ 7 ಕೇಂದ್ರ ಸಚಿವರುಗಳು ಸ್ಪರ್ಧೆ ಬಯಸಿದ್ದಾರೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ಉತ್ತರ ಪ್ರದೇಶದಿಂದ ಆಯ್ಕೆ ಬಯಸಿದ್ದಾರೆ.
ಕಾನೂನು ಸಚಿವ ಮತ್ತು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಬಿಹಾರ ಮತ್ತು ಮಹಾರಾಷ್ಚ್ರದಿಂದ ಧರ್ಮೇಂದ್ರ ಪ್ರಧಾನ್ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್ ಚಂದ್ ಗೆಹ್ಲೋಟ್ ಮಧ್ಯಪ್ರದೇಶದಿಂದ ಆಯ್ಕೆಯಾಗಿದ್ದಾರೆ. ಆರೋಗ್ಯ ಸಚಿವ ಜೆ.ಪಿ ನಡ್ಡಾ ಹಿಮಾಚಲ ಪ್ರದೇಶದಿಂದ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮತ್ತಿಬ್ಬರು ಕೇಂದ್ರ ಸಚಿವರುಗಳಾದ ಪುರುಷೋತ್ತಮ್ ರೂಪಾಲ ಮತ್ತು ಮನ್ಷುಖ್ ಮಾಂಡವಿಯಾ ಚುನಾವಣೆಯಿಲ್ಲದೇ ಗುಜರಾತ್ ನಿಂದ ಆಯ್ಕೆಯಾಗಿದ್ದಾರೆ. 
ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಬಿಹಾರ, ಆಂಧ್ರ ಪ್ರದೇಶ, ಒಡಿಸಾ, ರಾಜಸ್ತಾನ, ಹರ್ಯಾಣ ಮತ್ತು ಉತ್ತಾರಖಂಡ ರಾಜ್ಯಗಳಲ್ಲಿ  ಪ್ರಮುಖ ಪಕ್ಷಗಳು ಅಧಿಕೃತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನು ಉಳಿದ ಆರು ರಾಜ್ಯಗದಳಾದ ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರಾಖಂಡ್, ಜಾರ್ಖಂಡ್ ಮತ್ತು ಛತ್ತೀಸ್ ಗಡ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಮಾರ್ಚ್ 23 ರಂದು ಚುನಾವಣೆ ನಡೆಯಲಿದೆ. 58 ರಾಜ್ಯಸಭೆ ಸೀಟುಗಳಿಗೆ 16 ರಾಜ್ಯಗಳಿಂದ ಚುನಾವಣೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com