ಸದನದಲ್ಲಿ ಸುಗಮ ಕಲಾಪ ನಡೆಯುವವರೆಗೆ ಅವಿಶ್ವಾಸ ನಿರ್ಣಯಕ್ಕೆ ಅವಕಾಶವಿಲ್ಲ: ಸುಮಿತ್ರಾ ಮಹಾಜನ್

ಅವಿಶ್ವಾಸ ನಿರ್ಣಯ ಪ್ರತಿ ತಲುಪಿದೆ, ಆದರೆ ಕಲಾಪ ಕ್ರಮಬದ್ದವಾಗಿಲ್ಲ ಆದ ಕಾರಣ ಲೋಕಸಭೆಯಲ್ಲಿ ಅದನ್ನು ಮಂಡನೆ ಮಾಡಲಾಗುವುದಿಲ್ಲ" ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ.
ಸುಮಿತ್ರಾ ಮಹಾಜನ್
ಸುಮಿತ್ರಾ ಮಹಾಜನ್
ನವದೆಹಲಿ: "ಅವಿಶ್ವಾಸ ನಿರ್ಣಯ ಪ್ರತಿ ತಲುಪಿದೆ, ಆದರೆ ಕಲಾಪ ಕ್ರಮಬದ್ದವಾಗಿಲ್ಲ ಆದ ಕಾರಣ ಲೋಕಸಭೆಯಲ್ಲಿ ಅದನ್ನು ಮಂಡನೆ ಮಾಡಲಾಗುವುದಿಲ್ಲ" ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ.
ವಿರೋಧಪಕ್ಷಗಳು ಮಡಿಸಲು ಉದ್ದೇಶಿಸಿದ  ಅವಿಶ್ವಾಸ ನಿರ್ಣಯ ಇಂದು ಲೋಕಸಭೆಯಲ್ಲಿ ಮಂಡನೆಯಾಗಲಿಲ್ಲ. ವಿರೋಧ ಪಕ್ಷಗಳ ಪ್ರತಿಭಟನೆಗಳ ನಡುವೆ ಲೋಕಸಭಾ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
"ಟಿಡಿಪಿಯು ಆಂಧ್ರ ಪ್ರದೇಶದಲ್ಲಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ನಮಗೆ ತಿಳಿದಿದೆ. ಅವರು 2019ರ ಚುನಾವಣೆಯಲ್ಲಿ ನಾವು ಸೋಲುವುದನ್ನು ಕಾಯುತ್ತಿದ್ದಾರೆ. ಈ ಮೂಲಕ ಅವರು ತಾವು ಕಳೆದುಕೊಂಡ ಸ್ಥಳಾವಕಾಶವನ್ನು ಮತ್ತೆ ಪಡೆಯುವುದಕ್ಕೆ ಅನುಕೂಲಕರ ವಾತಾವರಣ ಬಯಸುತ್ತಿದ್ದಾರೆ. ಆದರೆ ಪ್ರಶ್ನೆ ಏನೆಂದರೆ ನಮ್ಮಸರ್ಕಾರ ಆಂಧ್ರ ಪ್ರದೇಶದ ಒಳಿತಿಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎನ್ನುವುದನ್ನು ತಿಳಿದುಕೊಳ್ಳಲು ಅಲ್ಲಿನ ಮುಖ್ಯಮಂತ್ರಿ ನಾಲ್ಕು ವರ್ಷಗಳ ಸಮಯವನ್ನೇಕೆ ತೆಗೆದುಕೊಂಡರು?
"ಟಿಡಿಪಿಯ ಈ ನಡೆಯನ್ನು ಬಿಜೆಪಿ ಉತ್ತಮವಾಗಿಯೇ ಬಳಸಿಕೊಳ್ಳಲಿದೆ, ನಾವು ಆಂಧ್ರ ಪ್ರದೇಶದಲ್ಲಿ ರಾಜಕೀಯವಾಗಿ ಬೆಳೆಯಲು, ರಾಜ್ಯದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲು ಈ ಅವಕಾಶವನ್ನು ನಮ್ಮ ಪಕ್ಷ ಬಳಸಿಕೊಳ್ಳಲಿದೆ. ನಾವು ಆಂಧ್ರ ಪ್ರದೇಶವು ನಮ್ಮ ಮುಂದಿನ ತ್ರಿಪುರಾ ಆಗಲಿದೆ ಎನ್ನುವುದನ್ನು ಸಾಬೀತು ಪಡಿಸಲಿದ್ದೇವೆ."  ಸಂಸತ್ತಿನ ಹೊರಗೆ ಮಾತನಾಡಿದ  ಬಿಜೆಪಿ ರಾಷ್ಟ್ರೀಯ ವಕ್ತಾರ ಜಿ.ವಿ.ಎಲ್ ನರಸಿಂಹ ರಾವ್ ಹೇಳಿದ್ದಾರೆ.
ಪ್ರತಿಪಕ್ಷಗಳ ಗದ್ದಲಕ್ಕೆ ಹತ್ತನೇ ದಿನದ ಲೋಕಸಬಾ ಕಲಾಪವೂ ಬಲಿಯಾಗಿದೆ. ಟಿಡಿಪಿ, ವೈಎಸ್ಆರ್ ಕಾಂಗ್ರೆಸ್, ಎಐಎಡಿಎಂಕೆ, ಆರ್ ಜೆಡಿ ಸೇರಿ ವಿವಿಧ ಪ್ರತಿಪಕ್ಷಗಳು ಬ್ಯಾಂಕಿಂಗ್ ಹಗರಣ , ಆಂಧ್ರಕ್ಕೆ ವಿಶೇಷ ಸ್ಥಾನಮಾನ ಸೇರಿ ನಾನಾ ವಿಚಾರಗಳನ್ನೆತ್ತಿ ತಮ್ಮ ಪ್ರತಿಭಟನೆ ನಡೆಸಿದವು. ಸ್ಪೀಕರ್ ಸುಮಿತ್ರಾ ಮಹಾಜನ್ ಪ್ರಶ್ನೋತ್ತರ ಕಲಾಪ ಪ್ರಾರಂಭಿಸುವ ವೇಳೆ ಈ ಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಗದ್ದಲ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com