ಅನಾಣ್ಯೀಕರಣ ಜಾರಿ ನಂತರ ಹಣಕಾಸು ಸಚಿವಾಲಯದಿಂದ ಅತಿಹೆಚ್ಚು ಆರ್ ಟಿಐ ಅರ್ಜಿ ತಿರಸ್ಕೃತ: ಸಿಐಸಿ ವರದಿ

ದೇಶದಲ್ಲಿ ಅನಾಣ್ಯೀಕರಣ ಜಾರಿಗೊಂಡ ವರ್ಷ ((2016-17)ದಲ್ಲಿ ದೇಶದಲ್ಲಿ ಜಾರಿಯಲ್ಲಿರುವ ಮಾಹಿತಿ ಹಕ್ಕು ಕಾಯ್ದೆ (ಆರ್ ಟಿಐ) ಅಡಿಯಲ್ಲಿ ಕೇಂದ್ರ ಸರ್ಕಾರದ ಸಚಿವಾಲಯಗಳಿಗೆ ಸಲ್ಲಿಕೆಯಾದ........
ಹಣಕಾಸು ಸಚಿವ ಅರುಣ್ ಜೇಟ್ಲಿ
ಹಣಕಾಸು ಸಚಿವ ಅರುಣ್ ಜೇಟ್ಲಿ
ನವದೆಹಲಿ: ದೇಶದಲ್ಲಿ ಅನಾಣ್ಯೀಕರಣ ಜಾರಿಗೊಂಡ ವರ್ಷ ((2016-17)ದಲ್ಲಿ ದೇಶದಲ್ಲಿ ಜಾರಿಯಲ್ಲಿರುವ ಮಾಹಿತಿ ಹಕ್ಕು ಕಾಯ್ದೆ (ಆರ್ ಟಿಐ) ಅಡಿಯಲ್ಲಿ ಕೇಂದ್ರ ಸರ್ಕಾರದ ಸಚಿವಾಲಯಗಳಿಗೆ ಸಲ್ಲಿಕೆಯಾದ ಅರ್ಜಿಗಳ ಪೈಕಿ ಅತಿ ಹೆಚ್ಚಿನ ಸಂಖ್ಯೆಯ  ಅರ್ಜಿ ಸ್ವೀಕರಿಸಿದ ದಾಖಲೆ ಹಣಕಾಸು ಸಚಿವಾಲಯಕ್ಕೆ ಸಲ್ಲುತ್ತದೆ. ಅದೇ ರೀತಿ ಹೆಚ್ಚಿನ ಸಂಖ್ಯೆಯ ಅರ್ಜಿ ತಿರಸ್ಕರಿಸಿದ ದಾಖಲೆ ಸಹ ಇದೇ ಹಣಕಾಸು ಸಚಿವಾಲಯದ್ದೇ ಆಗಿದೆ.
ಕೇಂದ್ರ ಮಾಹಿತಿ ಆಯೋಗ (ಸಿಐಸಿ) ನ ವಾರ್ಷಿಕ ವರದಿಯ ಪ್ರಕಾರ ಪ್ರಸ್ತುತ ಕೇಂದ್ರ ಸರ್ಕಾರದಡಿಯಲ್ಲಿ ಬರುವ 20 ಇಲಾಖೆಗಳು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಗರಿಷ್ಠ ಸಂಖ್ಯೆಯ ಅರ್ಜಿಗಳನ್ನು ಸ್ವೀಕರಿಸಿದೆ.
2016-17ರಲ್ಲಿ ಹಣಕಾಸು ಸಚಿವಾಲಯವು 1,51,186 ಆರ್ ಟಿಐ ಅರ್ಜಿಗಳನ್ನು ಸ್ವೀಕರಿಸಿದೆ. ಇದರಲ್ಲಿ 27,833 ಅರ್ಜಿಗಳು ತಿರಸ್ಕೃತಗೊಂಡಿದೆ ಎಂದು ವರದಿ ಹೇಳಿದೆ.
ಇದಲ್ಲದೆ ಗೃಹ  ಸಚಿವಾಲಯ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮತ್ತು ಪ್ರಧಾನ ಮಂತ್ರಿಯ ಕಛೇರಿಯು ಸಹ ಶೇ. 10ಕ್ಕಿಂತ ಹೆಚ್ಚಿನ ಪ್ರಮಾಣದ ಆರ್ ಟಿಐ ಅರ್ಜಿಗಳನ್ನು ತಿರಸ್ಕರಿಸಿದ್ದವು ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಏಪ್ರಿಲ್ 1, 2017ರ ದಾಖಲೆಯಂತೆ 26,449 ಆರ್ ಟಿಐ ಅರ್ಜಿಗಲು ವಿಲೇವಾರಿಯಾಗದೆ ಬಾಕಿ ಇದೆ. ಮಾಹಿತಿ ಕೊರತೆ, ಮಾಹಿತಿ ನೀಡುವಲ್ಲಿ ವಿಳಂಬ ಮಾಡಿದ ಪ್ರಕರಣದ ಅಡಿಯಲ್ಲಿ 2016-17ರಲ್ಲಿ ಸಿಐಸಿ ಎಲ್ಲಾ ಇಲಾಖೆಗಳಿಗೆ ಒಟ್ಟಾಗಿ 18.97 ಲಕ್ಷ ರೂ ದಂಡ ವಿಧಿಸಿತ್ತು. ಈ ಪ್ರಸಕ್ತ ವರ್ಷವೂ ಸಹ ಸಿಐಸಿ ಒಟ್ಟಾರೆ 8.59 ಲಕ್ಷ  ದಂಡದ ಮೇಲಿನ ಕಮಿಷನ್ ಸ್ವೀಕರಿಸಿದೆ
2015-16ರಲ್ಲಿ 11,65,217 ಆರ್ ಟಿಐ ಅರ್ಜಿಗಳು ಬಾಕಿಯಾಗಿದ್ದು  11,65,217 ಅರ್ಜಿಗಳ ವಿಲೇವಾರಿ ವಿಳಂಬವಾಗಿದೆ 2016-17ರಲ್ಲಿ ಒಟ್ಟಾರೆ ಅರ್ಜಿಯ 6.59 ಶೇಕಡಾ ಅರ್ಜಿಗಳು ತಿರಸ್ಕರಿಸಲ್ಪಟ್ಟಿದ್ದವು. ಇದಕ್ಕೂ ಹಿಂದಿನ ವರ್ಷದಲ್ಲಿ ತಿರಸ್ಕರಿಸಲ್ಪಟ್ಟ ಅರ್ಜಿಗಳ ಪ್ರಮಾಣ  ಶೇ 6.62 ರಷ್ಟು ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com