ರೋಹಿಂಗ್ಯ ನ್ನರು ಭದ್ರತೆಗೆ ಅಪಾಯ, ಗಡಿಪಾರು ಮಾಡಿ: ಆರ್ ಎಸ್ಎಸ್

ರಾಷ್ಟ್ರೀಯ ಸ್ವಯಂ ಸೇವಕ ಸಂಘ ರೋಹಿಂಗ್ಯ ನಿರಾಶ್ರಿತರನ್ನು ದೇಶದ ಭದ್ರತೆಗೆ ಅಪಾಯಕಾರಿ ಎಂದಿದ್ದು, ಗಡಿಪಾರು ಮಾಡಬೇಕೆಂದು ಆಗ್ರಹಿಸಿದೆ.
ರೋಹಿಂಗ್ಯ
ರೋಹಿಂಗ್ಯ
ಜಮ್ಮು: ರಾಷ್ಟ್ರೀಯ ಸ್ವಯಂ ಸೇವಕ ಸಂಘ ರೋಹಿಂಗ್ಯ ನಿರಾಶ್ರಿತರನ್ನು ದೇಶದ ಭದ್ರತೆಗೆ ಅಪಾಯಕಾರಿ ಎಂದಿದ್ದು, ಗಡಿಪಾರು ಮಾಡಬೇಕೆಂದು ಆಗ್ರಹಿಸಿದೆ. 
ಮಯನ್ಮಾರ್, ಬಾಂಗ್ಲಾದೇಶಗಳಿಂದ ಬಂದು ಜಮ್ಮು-ಕಾಶ್ಮೀರದಲ್ಲಿರುವ ರೋಹಿಂಗ್ಯ ಮುಸ್ಲಿಮರು ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದಾರೆ. ನಾವು ರೋಹಿಂಗ್ಯನ್ನರನ್ನು ನಿರಾಶ್ರಿತರು ಎಂದು ಪರಿಗಣಿಸುವುದಿಲ್ಲ. ರೋಹಿಂಗ್ಯ ಮುಸ್ಲಿಮರು ವಿದೇಶದಿಂದ ಅಕ್ರಮವಾಗಿ ವಲಸೆ ಬಂದಿರುವವೌರ್ ಎಂದು ಆರ್ ಎಸ್ ಎಸ್ ನ ಪ್ರಾಂತ್ ಸಂಘಚಾಲಕ, ನಿವೃತ್ತ ಬ್ರಿಗೇಡಿಯರ್ ಸುಚಿತ್ ಸಿಂಗ್ ಹೇಳಿದ್ದಾರೆ. 
ಜಮ್ಮು-ಕಾಶ್ಮೀರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಅವರು, ದೇಶದ ಭದ್ರತೆಗೇ ಅಪಾಯಕಾರಿಯಾಗಿರುವ ಅವರನ್ನು ನಾವೇಕೆ ಸಹಿಸಿಕೊಳ್ಳಬೇಕು? ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಕ್ರಮವಾಗಿ ಬಂದಿರುವ ರೋಹಿಂಗ್ಯ ಮುಸ್ಲಿಮರನ್ನು ಗುರುತಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ್ದಾರೆ. 
ರಾಜ್ಯದಲ್ಲಿ ರೋಹಿಂಗ್ಯ ಅಕ್ರಮ ವಲಸಿಗರು ಪ್ರವೇಶಿಸುವುದಕ್ಕೆ ಅವಕಾಶ ನೀಡಿದ ಕಾಂಗ್ರೆಸ್ ನೇತೃತ್ವದ ಈ ಹಿಂದಿನ ಯುಪಿಎ ಸರ್ಕಾರದ ವಿರುದ್ಧವೂ ಆರ್ ಎಸ್ ಎಸ್ ನಾಯಕರು ವಾಗ್ದಾಳಿ ನಡೆಸಿದ್ದು, ಈಗಿನ ಸ್ಥಿತಿಗೆ ಈ ಹಿಂದಿನ ಯುಪಿಎ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com