ನಿಷೇಧಿತ ನೋಟುಗಳನ್ನು ಪುಡಿ ಮಾಡಲಾಗುತ್ತಿದೆ: ಆರ್ ಬಿಐ

2016 ರ ನವೆಂಬರ್ ನಲ್ಲಿ ನಿಷೇಧಗೊಂಡಿದ್ದ 500, 1000 ರೂ ನೋಟುಗಳನ್ನು ಪುಡಿ ಮಾಡಲಾಗುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ನೀಡಿದೆ.
ಆರ್ ಬಿಐ
ಆರ್ ಬಿಐ
ನವದೆಹಲಿ: 2016 ರ ನವೆಂಬರ್ ನಲ್ಲಿ ನಿಷೇಧಗೊಂಡಿದ್ದ 500, 1000 ರೂ ನೋಟುಗಳನ್ನು ಪುಡಿ ಮಾಡಲಾಗುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ನೀಡಿದೆ. 
2017 ರ ಜೂನ್ ವರೆಗೂ 15.28 ಟ್ರಿಲಿಯನ್ ಮೊತ್ತದ ಹಳೆಯ 500, 1,000 ರೂಪಾಯಿ ನೋಟುಗಳು ಲಭ್ಯವಾಗಿದೆ ಎಂದು ಆರ್ ಬಿಐ ಹೇಳಿತ್ತು. ಈಗ ಇಷ್ಟೂ ನೋಟುಗಳನ್ನು ಪುಡಿ ಮಾಡಲಾಗುತ್ತಿದೆ, ಅತ್ಯಾಧುನಿಕ ಕರೆನ್ಸಿ ಪರಿಶೀಲನೆ ಮತ್ತು ಸಂಸ್ಕರಣಾ ವ್ಯವಸ್ಥೆಯ ಮೂಲಕ ನೋಟುಗಳ ಎಣಿಕೆ ಕಾರ್ಯ ನಡೆಯುತ್ತಿದ್ದು ಟೆಂಡರಿಂಗ್ ಪ್ರಕ್ರಿಯೆಯ ಮೂಲಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರ್ ಟಿಐ ಪ್ರಶ್ನೆಯೊಂದಕ್ಕೆ ಆರ್ ಬಿ ಐ ಉತ್ತರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com