ಜಮ್ಮು-ಕಾಶ್ಮೀರ: ಪಾಕಿಸ್ತಾನ ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು ಒಂದೇ ಕುಟುಂಬದ ಐವರು ನಾಗರಿಕರು ಸಾವನ್ನಪ್ಪಿದ್ದರೆ, ಇಬ್ಬರು ಗಾಯಗೊಂಡಿದ್ದಾರೆ.
ಮೃತರನ್ನು 35 ವರ್ಷದ ಮೊಹಮ್ಮದ್ ರಂಜಾನ್, ಅವರ ಪತ್ನಿ ಮಲಿಕಾ ಬೇ 32 ಹಾಗೂ ಈ ದಂಪತಿಗಳ ಇಬ್ಬರು ಪುತ್ರರಾದ 14 ವರ್ಷದ ಅಬ್ದುಲ್ ರೆಹಮಾನ್ 12 ವರ್ಷದ ಮೊಹಮ್ಮದ್ ರಿಜ್ವಾನ್ ಹಾಗೂ 7 ವರ್ಷದ 7 ವರ್ಷದ ರಜಾಕ್ ರಂಜಾನ್ ಎಂದು ಗುರುತಿಸಲಾಗಿದೆ.
ಜಮ್ಮು-ಕಾಶ್ಮೀರ ಡಿಜಿಪಿ ಎಸ್ ಪಿ ವೈದ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸಿರುವುದರ ವಿಡಿಯೋವನ್ನು ಎಎನ್ಐ ಬಿಡುಗಡೆ ಮಾಡಿದೆ. ಪಾಕಿಸ್ತಾನ-ಭಾರತದ ನಡುವೆ ರಾಯಭಾರಿ ಅಧಿಕಾರಿಗಳ ಬಿಕ್ಕಟ್ಟು ಉಂಟಾಗಿರುವ ಬೆನ್ನಲ್ಲೆ ಈ ಘಟನೆಯೂ ಸಂಭವಿಸಿದೆ.
ಅತ್ತ ಪಾಕಿಸ್ತಾನವೂ ಭಾರತದ ವಿರುದ್ಧ ಕದನ ವಿರಾಮ ಉಲ್ಲಂಘನೆ ಆರೋಪ ಮಾಡಿದೆ. ಅಷ್ಟೇ ಅಲ್ಲದೇ ತನ್ನ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದೂ ಪಾಕ್ ಆರೋಪಿಸಿದೆ.