ಜನಸೇವೆ ಮಾಡಲು ಇದ್ದೇವೆ, ಕೋರ್ಟ್ ಗಳಿಗೆ ಅಲೆಯಲು ಸಮಯವಿಲ್ಲ: ಸರಣಿ ಕ್ಷಮೆಗಳ ಬಗ್ಗೆ ಸಿಸೋಡಿಯಾ

ವಿರೋಧ ಪಕ್ಷಗಳ ರಾಜಕಾರಣಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಈಗ ಒಬ್ಬೊಬ್ಬರಲ್ಲಿಯೇ ಕ್ಷಮೆ ಕೇಳುತ್ತಿದ್ದಾರೆ.
ಮನೀಷ್ ಸಿಸೋಡಿಯಾ
ಮನೀಷ್ ಸಿಸೋಡಿಯಾ
ನವದೆಹಲಿ: ವಿರೋಧ ಪಕ್ಷಗಳ ರಾಜಕಾರಣಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಈಗ ಒಬ್ಬೊಬ್ಬರಲ್ಲಿಯೇ ಕ್ಷಮೆ ಕೇಳುತ್ತಿದ್ದಾರೆ. 
ಕೇಜ್ರಿವಾಲ್ ಕ್ಷಮೆಯಾಚಿಸುತ್ತಿರುವುದರ ಬಗ್ಗೆ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಪ್ರತಿಕ್ರಿಯೆ ನೀಡಿದ್ದು, ನಾವು ಇಲ್ಲಿರುವುದು ಜನರ ಸೇವೆ ಮಾಡುವುದಕ್ಕಾಗಿ, ಕ್ಷಮೆ ಕೇಳುವ ವಿಷಯಗಳಿಗೆ ಕೋರ್ಟ್ ಗೆ ಹೋಗಲು ಸಮಯವಿಲ್ಲ ಎಂದು ಹೇಳಿದ್ದಾರೆ. 
ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಅರವಿಂದ್ ಕೇಜ್ರಿವಾಲ್ ಈಗ ಗಡ್ಕರಿ ಹಾಗೂ ಕಪಿಲ್ ಸಿಬಲ್ ಅವರಲ್ಲಿ ಕ್ಷಮೆ ಕೇಳಿದ್ದು, ಮತ್ತೊಂದು ವಾರದಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರಲ್ಲಿಯೂ ಕ್ಷಮೆ ಕೇಳಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com