ಇರಾಕ್ ನಲ್ಲಿ ಹತ್ಯೆಯಾದ ಭಾರತೀಯರ ಮಾಹಿತಿಗಾಗಿ ಕುಟುಂಬಗಳ ಪರದಾಟ

ಪಂಜಾಬ್ ನ ಅಮೃತಸರ ಮತ್ತು ತರ್ನ್ ತರನ್ ಜಿಲ್ಲೆಯ 8 ಮಂದಿ ಇರಾಕ್ ನಲ್ಲಿ ಹತ್ಯೆಯಾಗಿರುವುದಾಗಿ ಮಂಗಳವಾರ ...
ಇರಾಕ್ ನಲ್ಲಿ ಹತ್ಯೆಯಾದ ಹರಿಸಿಮ್ರಾನ್ ಸಿಂಗ್ ಕುಟುಂಬ
ಇರಾಕ್ ನಲ್ಲಿ ಹತ್ಯೆಯಾದ ಹರಿಸಿಮ್ರಾನ್ ಸಿಂಗ್ ಕುಟುಂಬ
Updated on
ಅಮೃತಸರ: ಪಂಜಾಬ್ ನ ಅಮೃತಸರ ಮತ್ತು ತರ್ನ್ ತರನ್ ಜಿಲ್ಲೆಯ 8 ಮಂದಿ ಇರಾಕ್ ನಲ್ಲಿ ಹತ್ಯೆಯಾಗಿರುವುದಾಗಿ ಮಂಗಳವಾರ ಖಚಿತಪಡಿಸಲಾಗಿದ್ದು, ಕಣ್ಣೀರಿಡುತ್ತಿರುವ ಕುಟುಂಬ ಸದಸ್ಯರು ಕಳೆದ ನಾಲ್ಕು ವರ್ಷಗಳಿಂದ ಅವರ ಮಾಹಿತಿಗಾಗಿ ಹೋರಾಟ ನಡೆಸಿದ್ದಾರೆ.
2014ರಲ್ಲಿ ಐಸಿಸ್ ನಿಂದ ಅಪಹರಣಕ್ಕೆ ಒಳಗಾಗಿ ಹತ್ಯೆಯಾದ 39 ಭಾರತೀಯರ ಪೈಕಿ ಪಂಜಾಬ್ ರಾಜ್ಯದ ಎರಡು ಜಿಲ್ಲೆಗಳ 8 ಮಂದಿ ಹತ್ಯೆಯಾಗಿದ್ದಾರೆ. 
ಆ ಎಂಟು ಮಂದಿಯನ್ನು ಕಳೆದುಕೊಂಡ ಕುಟುಂಬಗಳಿಗೆ ಈಗಲೂ ಅವರ ಬಗ್ಗೆ ಖಚಿತ ಮಾಹಿತಿ ಇಲ್ಲ. ಹೀಗಾಗಿ ಅವರು ಇನ್ನೂ ಬದುಕುಳಿದಿರುವ ನಿರೀಕ್ಷೆಯಲ್ಲಿದ್ದಾರೆ.
ನನ್ನ ಸಹೋದರ ಮಂಜಿಂದರ್ ಸಿಂಗ್ ಅವರು ಉದ್ದೋಗಕ್ಕಾಗಿ ಇರಾಕ್ ಗೆ ತೆರಳಿದ್ದರು. ಒಂದು ದಿನ ಆತನಿಂದ ದೂರವಾಣಿ ಕರೆ ಬಂತು. ನಾನು ಉಗ್ರರ ಕೃತ್ಯಗಳಿಂದಾಗಿ ಮರಳಿ ಬರಲು ಸಾಧ್ಯವಾಗದಂತಹ ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂದು ಹೇಳಿದ್ದರು ಎಂದು ಆತನ ಸಹೋದರಿ ಮೆಹ್ತಾ ಗ್ರಾಮದ ನಿವಾಸಿ ಹೇಳಿದ್ದಾರೆ. ಅಲ್ಲದೆ ಈ ಕುರಿತು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 2014 ರಲ್ಲಿ ಇರಾಕ್ ನಿಂದ ಐಸಿಸ್ ಅಪಹರಣ ಮಾಡಿದ್ದ 39 ಮಂದಿ ಭಾರತೀಯರನ್ನು ಐಸಿಸ್ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. 
ಮೊಸುಲ್ ನಿಂದ ಅಪಹರಣ ಮಾಡಿದವರ ಹತ್ಯೆ ಕುರಿತು ಖಚಿತ ಮಾಹಿತಿ ಪಡಿಸಿಕೊಳ್ಳಲು ಆಳವಾದ ರೇಡಾರ್ ಬಳಕೆ ಮಾಡಲಾಗಿದ್ದು, ಹತ್ಯೆಯಾದ ಭಾರತೀಯ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಅಲ್ಲದೇ ಎಲ್ಲರ ಮೃತದೇಹಗಳನ್ನು ಸಾಮೂಹಿಕವಾಗಿ ಸಮಾಧಿ ಮಾಡಲಾಗಿತ್ತು. ಮೃತ ದೇಹಗಳನ್ನು ಗುರುತಿಸಲು ಡಿಎನ್‍ಎ ಪರೀಕ್ಷೆಗಾಗಿ ಬಾಗ್ದಾದ್ ಗೆ ಕಳುಹಿಸಲಾಗಿದೆ. ಸೋಮವಾರ ನಮಗೆ ಲಭಿಸಿದ ಮಾಹಿತಿ ಪ್ರಕಾರ 39 ಮೃತದೇಹಗಳಲ್ಲಿ 38 ಮಂದಿಯ ಡಿಎನ್‍ಎ ಸ್ಯಾಪಲ್ ಮ್ಯಾಚ್ ಆಗಿದೆ. 39ನೇ ಮೃತ ದೇಹದ ಡಿಎನ್‍ಎ ಶೇ. 70 ರಷ್ಟು ಮ್ಯಾಚ್ ಆಗಿದೆ ಎಂದು ಸುಷ್ಮಾ ತಿಳಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com