ಮೊಸೂಲ್ ನಲ್ಲಿರುವ ಗ್ರಾಮವೊಂದರಲ್ಲಿ ಮೃತದೇಹಗಳನ್ನು ಸಮಾಧಿ ಮಾಡಲಾಗಿದ್ದು, ಕಳೆದ ಜುಲೈನಲ್ಲಿ ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇರಾಕ್ ನ ಅಧಿಕಾರಿ ಅಬ್ದುಲ್ ಅಮಿರ್ ಅಲ್ ಶಿಮಾರಿ ಹೇಳಿದ್ದಾರೆ. ಮೃತದೇಹಗಳು ಮಿತ್ರ ರಾಷ್ಟ್ರ ಭಾರತದ ನಾಗರಿಕರದ್ದಾಗಿದ್ದು, ಅವರ ಘನತೆಯನ್ನು ಕಾಪಾಡಬೇಕಿತ್ತು. ಆದರೆ ದುಷ್ಟಶಕ್ತಿಗಳು ಇಸ್ಲಾಮ್ ನ ತತ್ವಗಳಿಗೆ ಅಪಖ್ಯಾತಿ ಉಂಟುಮಾಡಿವೆ ಎಂದು ಇರಾಕ್ ನ ಹುತಾತ್ಮ ಸಂಸ್ಥೆಯ ಮುಖ್ಯಸ್ಥರು ಅಸಮಾಧಾನ ವ್ಯಕ್ತಪಾಡಿಸಿದ್ದಾರೆ.