ಪ್ರಧಾನಿ ನರೇಂದ್ರ ಮೋದಿ ಅವರು ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನದ ಮೂಲಕ ಹೆಣ್ಣು ಮಗುವಿನ ಪ್ರಾಮುಖ್ಯತೆಯನ್ನು ಸಮಾಜಕ್ಕೆ ತಿಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ರಾಜಸ್ತಾನದ ಈ ಹಳ್ಳಿಯಲ್ಲಿ 11 ವರ್ಷಗಳ ಹಿಂದಿನಿಂದಲೂ ಹೆಣ್ಣು ಮಗು ಜನಿಸಿದರೆ ಆ ಮಗುವಿನ ಹೆಸರಲ್ಲಿ 111 ಸಸಿಗಳನ್ನು ನೆಡುವ ವಿಶಿಷ್ಠ ಸಂಪ್ರದಾಯವನ್ನು ಪಿಪ್ಲಾಂಟ್ರಿ ಹಳ್ಳಿಯ ಜನರು ಆಚರಿಸು ಬಂದಿದ್ದಾರೆ.