ಇರಾಕ್ ನಲ್ಲಿ 39 ಭಾರತೀಯರ ಹತ್ಯೆ: ಸರ್ಕಾರದಿಂದ ಮಾಹಿತಿ ವಿಳಂಬ ಏಕೆ- ಶಶಿ ತರೂರ್ ಪ್ರಶ್ನೆ

ಭಾರತದಿಂದ ಅಪಹರಣಗೊಂಡಿದ್ದ 39 ಭಾರತೀಯರು ಇರಾಕ್ ನ ಮೊಸುಲ್ ನಲ್ಲಿ ಹತ್ಯೆಗೀಡಾಗಿರುವ ಸಂಬಂಧ ಸರ್ಕಾರದಿಂದ ಮಾಹಿತಿ ಏಕೆ ವಿಳಂಬ ಆಯ್ತು ಅಂತಾ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರಶ್ನಿಸಿದ್ದಾರೆ.
ಶಶಿ ತರೂರ್
ಶಶಿ ತರೂರ್

ನವದೆಹಲಿ: ಭಾರತದಿಂದ ಅಪಹರಣಗೊಂಡಿದ್ದ 39 ಭಾರತೀಯರು ಇರಾಕ್ ನ ಮೊಸುಲ್ ನಲ್ಲಿ ಹತ್ಯೆಗೀಡಾಗಿರುವುದು ಪ್ರತಿಯೊಬ್ಬ ಭಾರತೀಯರಿಗೂ ದು;ಖಕರ ಸಂಗತಿಯಾಗಿದೆ.  ಆದರೆ,ಸರ್ಕಾರದಿಂದ ಈ ಮಾಹಿತಿ ಏಕೆ ವಿಳಂಬ ಆಯ್ತು ಅಂತಾ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರಶ್ನಿಸಿದ್ದಾರೆ.

ರಾಜ್ಯಸಭೆಯಲ್ಲಿಂದು ಮಾತನಾಡಿದ ಅವರು. ಹೇಗೆ ಹತ್ಯೆಯಾಯಿತು. ಯಾವಾಗ ಹತ್ಯೆಯಾಯಿತು. ಅಲ್ಲದೇ, ಈ ವಿಚಾರದಲ್ಲಿ ಅವರ ಕುಟುಂಬಕ್ಕೆ ಸರ್ಕಾರಿ ಭಾರಿ ಭರವಸೆ ನೀಡಿದದ್ದು ಸರಿಯಲ್ಲ ಎಂದು ಶಶಿ ತರೂರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಐಸಿಸ್ ಉಗ್ರರು ಕೆಲ ಮೃತದೇಹಗಳನ್ನು ಬಾದೂಸ್ ಪ್ರದೇಶದಲ್ಲಿ ಸುಟ್ಟುಹಾಕಿದರು ಎಂಬ ಸ್ಥಳೀಯರ ಹೇಳಿಕೆ ಮೇಲೆ  ಅಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ದಿಬ್ಬಗಳ ಸಾಮೂಹಿಕ ಸಮಾಧಿಗಳ ಸುತ್ತ ರೆಡಾರ್ ಅಳವಡಿಸಲಾಗಿದ್ದು, ಮೃತದೇಹಗಳನ್ನು ಹೊರತೆಗೆಯುವಂತೆ ಇರಾಕ್ ನ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಮಾಡಿರುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸದನಕ್ಕೆ ಮಾಹಿತಿ ನೀಡಿದರು.

 ಉದ್ದ ಕೂದಲು, ಇರಾಕ್ ದೇಶದಲ್ಲದ, ಶೂ ಮತ್ತು ಗುರುತಿನ ಚೀಟಿಯಿಂದಾಗಿ 39 ಭಾರತೀಯ ಮೃತದೇಹಗಳನ್ನು ಕಂಡುಹಿಡಿಯಲಾಗಿದೆ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com