ಸಾಂದರ್ಭಿಕ ಚಿತ್ರ
ದೇಶ
ಛತ್ತೀಸ್ ಗಢ; 19 ವರ್ಷದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್, ವಿಷಪ್ರಾಶನ: ನಾಲ್ವರ ಬಂಧನ
ಛತ್ತೀಸ್ ಗಢದ ಜಂಗೀರ್ - ಚಂಪಾ ಜಿಲ್ಲೆಯಲ್ಲಿ ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ನಾಲ್ವರು 19 ವರ್ಷದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ...
ಕೋರ್ಬಾ : ಛತ್ತೀಸ್ ಗಢದ ಜಂಗೀರ್ - ಚಂಪಾ ಜಿಲ್ಲೆಯಲ್ಲಿ ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ನಾಲ್ವರು 19 ವರ್ಷದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಬಳಿಕ ಆಕೆಗೆ ವಿಷ ಉಣಿಸಿದ್ದು, ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
ಎರಡು ವಾರಗಳ ಹಿಂದೆ ಈ ಘಟನೆ ನಡೆದಿದ್ದು, ಎಲ್ಲಾ ಆರೋಪಿಗಳನ್ನು ನಿನ್ನೆ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ಮಾರ್ಚ್ 7ರಂದು ಖರೋದ್ ಗ್ರಾಮದ ಶೇವರಿನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಈ ಕುರಿತು ನಿನ್ನೆಯಷ್ಟೇ ದೂರು ದಾಖಲಾಗಿದ್ದು, ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶೇವರಿ ನಾರಾಯಣ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
ಮಾ.7ರಂದು ತನ್ನ ಮನೆಯಲ್ಲಿ ಒಂಟಿಯಾಗಿದ್ದಾಗ 12ನೇ ತರಗತಿಯ ವಿದ್ಯಾರ್ಥಿನಿ ಮೊಬೈಲ್ ಗೆ ಆರೋಪಿ ಸಾಗರ್ ಯಾದವ್ (24) ಎಂಬಾತನಿಂದ ಕರೆ ಬಂತು. "ನಿನ್ನ ಸ್ನೇಹಿತೆಯೊಬ್ಬಳು ಇಲ್ಲೇ ಎಲ್ಲೋ ನಿನಗಾಗಿ ಕಾಯತ್ತಿದ್ದಾಳೆ; ನಿನಗೆ ಅಲ್ಲಿ ಡ್ರಾಪ್ ಕೊಡುತ್ತೇನೆ' ಎಂದು ಹೇಳಿ ಆಕೆಯನ್ನು ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಒಯ್ದಿದ್ದ. ಅಲ್ಲಿ ಆತನ ಸ್ನೇಹಿತರಾದ ಲವ ನೋನಿಯಾ (28), ಕುಶ್‌ಕುಮಾರ್ ನೋನಿಯಾ (26) ಮತ್ತು 16ರ ಹರೆಯದ ಒಬ್ಬ ಹುಡುಗ ಸೇರಿಕೊಂಡು ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ಎಸಗಿ ಬಳಿಕ ಆಕೆಯನ್ನು ಕೊಲ್ಲುವ ಉದ್ದೇಶದಿಂದ ವಿಷಪ್ರಾಶನ ಮಾಡಿಸಿದ್ದಾರೆ.
ವಿದ್ಯಾರ್ಥಿನಿ ಹೇಗೋ ಕಷ್ಟಪಟ್ಟು ತನ್ನ ಮನೆ ತಲುಪಿ, ಪ್ರಜ್ಞೆ ಕಳೆದುಕೊಳ್ಳುವ ಮೊದಲು ತನ್ನ ದಾರುಣ ಸ್ಥಿತಿಯನ್ನು ಹೆತ್ತವರಿಗೆ ವಿವರಿಸಿದ್ದಾಳೆ. ಅವರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಿದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ