ಆಧಾರ್ ಯೋಜನೆ ಕುರಿತು ಪವರ್‏ಪಾಯಿಂಟ್ ಪ್ರಸ್ತುತಿಗಾಗಿ ಸುಪ್ರೀಂ ಅನುಮತಿ ಕೇಳಿದ ಕೇಂದ್ರ

ಆಧಾರ್ ಕುರಿತಂತೆ ನ್ಯಾಯಾಲಯಕ್ಕಿರಬಹುದಾದ ಕಳವಳಗಳನ್ನು ತಗ್ಗಿಸುವ ಸಲುವಾಗಿ ಆಧಾರ್ ಯೋಜನೆ ಮಾಹಿತಿ ಇರುವ ಪವರ್ ಪಾಯಿಂಟ್ ಪ್ರಸ್ತುತಿಗೆ ಯುಐಡಿಎಐ ಸಿಇಒಗೆ...
ಆಧಾರ್ ಕಾರ್ಡ್
ಆಧಾರ್ ಕಾರ್ಡ್
ನವದೆಹಲಿ: ಆಧಾರ್ ಕುರಿತಂತೆ ನ್ಯಾಯಾಲಯಕ್ಕಿರಬಹುದಾದ  ಕಳವಳಗಳನ್ನು ತಗ್ಗಿಸುವ ಸಲುವಾಗಿ ಆಧಾರ್ ಯೋಜನೆ ಮಾಹಿತಿ ಇರುವ ಪವರ್ ಪಾಯಿಂಟ್ ಪ್ರಸ್ತುತಿಗೆ ಶಿಷ್ಟ ಗುರುತಿನ ಪ್ರಾಧಿಕಾರದ (ಯುಐಡಿಎಐ) ಸಿಇಒಗೆ ಅವಕಾಶ ನಿಡಬೇಕೆಂದು ಕೋರಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದೆ.
ಆಧಾರ್ ಸಂಬಂಧಿತ ಅನೇಕ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ತಾವು ವಿಷಯದ ಬಗ್ಗೆ ಸಂವಿಧಾನ ಪೀಠದ ಇತರೆ ನಾಲ್ವರು ಸದಸ್ಯರೊಡನೆ ಚರ್ಚಿಸಿದ ಬಳಿಕ ಅರ್ಜಿ ವಿಚಾರಣೆಗೆ ಸಮಯ ನಿಗದಿ ಪಡಿಸುವುದಾಗಿ ಹೇಳಿದ್ದಾರೆ.
ಆಧಾರ್ ಮಾಹಿತಿ ಭದ್ರತೆ ಮತ್ತು ದೃಢೀಕರಣ ಆಧಾರ್ ಸಂಖ್ಯೆಯ ಪ್ರಯೋಜನಗಳನ್ನು  ಕುರಿತಂತೆ ಹಲವಾರು ತಾಂತ್ರಿಕ ಅಂಶಗಳಿದೆ, ಅವುಗಳನ್ನು ಪರಿಶೀಲಿಸಬೇಕಿದೆ ಎಂದು ಪೀಠವು ಅಭಿಪ್ರಾಯ ಪಟ್ಟಿದೆ.
ಯುಐಡಿಎಐ ಮುಖ್ಯಸ್ಥರು ತಾಂತ್ರಿಕ ಅಂಶಗಳ ಕುರಿತು ಹೆಚ್ಚು ಸ್ಪಷ್ಟತೆ ಒದಗಿಸಬೇಕು. ಎಂದು ಅಟಾರ್ನಿ ಜನರಲ್ ಕೆ. ವೇಣುಗೋಪಾಲ್ ಕೇಂದ್ರಕ್ಕೆ ಸೂಚಿಸಿದ್ದಾರೆ. ಭಾರತೀಯ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು ಎರಡು ಅಂಶಗಳನ್ನು ಪ್ರಧಾನವಾಗಿರಿಸಿಕೊಂಡಿದೆ. ಆಹಾರದ ಹಕ್ಕು ಮತ್ತು ಶಿಕ್ಷಣದ ಹಕ್ಕು ಮತ್ತು ಇನ್ನಿತರ  ಹಕ್ಕುಗಳನ್ನೊಳಗೊಂಡ ಒಂದು ಅಂಶವಾದರೆ ಸ್ವಾತಂತ್ರ್ಯ ಹಾಗೂ ಗೌಪ್ಯತೆ ಹಕ್ಕು ಇನ್ನೊಂದು ಅಂಶವಾಗಿದೆ ಎಂದು ಅವರು ಹೇಳಿದ್ದಾರೆ.
ಧಾರ್ಮಿಕ ಹಕ್ಕುಗಳ ಸ್ವಾತಂತ್ರ್ಯದ ಆಧಾರದ ಮೇಲೆ ಆಧಾರ್ ಯೋಜನೆ ಅಡಿಯಲ್ಲಿ ವೈಯಕ್ತಿಕ ಮಾಹಿತಿಯನ್ನು ಯಾರೊಬ್ಬರೂ ಕೇಳುಬಂತಿಲ್ಲ. ಆಧಾರ್ ಮಾಹಿತಿಯು ಗೌಪ್ಯತೆಯ ಹಕ್ಕನ್ನು ಮೀರದಂತಿರಬೇಕು. ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com