ಮುಂಬೈ: ಇತ್ತೀಚೆಗಷ್ಟೇ ನಿಧನರಾದ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಸ್ಮರಣಾರ್ಥವಾಗಿ ಇಂಡಿಯಾ ಪೋಸ್ಟ್ ವಿಶೇಷ ಪೋಸ್ಟಲ್ ಕವರನ್ನು ಬಿಡುಗಡೆ ಮಾಡಿದೆ.
ಮಹಾರಾಷ್ಟ್ರ ಹಾಗೂ ಗೋವಾ ವಿಭಾಗದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ (ಸಿಪಿಎಂಜಿ), ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್(ಟಿಐಎಫ್ಆರ್) ಜಂಟಿಯಾಗಿ ವಿಶೇಷ ಪೋಸ್ಟಲ್ ಕವರ್ ನ್ನು ಬಿಡುಗಡೆ ಮಾಡಿದ್ದಾರೆ.
ಶ್ರೇಷ್ಠ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ತನ್ನ ಎಲ್ಲಾ 22 ಕೇಂದ್ರಗಳಲ್ಲಿ ವಿಶೇಷ ಪೋಸ್ಟಲ್ ಕವರ್ ನ್ನು ಬಿಡುಗಡೆ ಮಾಡಲಾಗಿದೆ ಎಂದು ಸಿಪಿಎಂಜಿ ಹೆಚ್ ಸಿ ಅಗರ್ವಾಲ್ ಹೇಳಿದ್ದಾರೆ.