ದ್ರಾವಿಡ ಭಾಷೆಗಳ ಉಗಮ 4,500 ವರ್ಷಗಳ ಹಿಂದಿನದ್ದು: ಅಧ್ಯಯನ ವರದಿ

ದ್ರಾವಿಡ ಭಾಷೆಗಳ ಉಗಮ 4,500 ವರ್ಷಗಳಷ್ಟು ಹಿಂದಿನದ್ದು ಎಂದು ಅಧ್ಯಯನ ವರದಿಯೊಂದರ ಮೂಲಕ ತಿಳಿದುಬಂದಿದೆ.
ದ್ರಾವಿಡ ಭಾಷೆಗಳು
ದ್ರಾವಿಡ ಭಾಷೆಗಳು
Updated on
ಲಂಡನ್: ದ್ರಾವಿಡ ಭಾಷೆಗಳ ಉಗಮ 4,500 ವರ್ಷಗಳಷ್ಟು ಹಿಂದಿನದ್ದು ಎಂದು ಅಧ್ಯಯನ ವರದಿಯೊಂದರ ಮೂಲಕ ತಿಳಿದುಬಂದಿದೆ. 
ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳು ಉಗಮವಾಗಿದ್ದು 4,500 ವರ್ಷಗಳ ಹಿಂದೆ ಎಂದು ರಾಯಲ್ ಸೊಸೈಟಿ ಓಪನ್ ಸೈನ್ಸ್ ನ ಜರ್ನಲ್ ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ಹೇಳಿದೆ. 
ನಾಲ್ಕು ದ್ರಾವಿಡ ಭಾಷೆಗಳಲ್ಲಿನ ಸಾಹಿತ್ಯಿಕ ಸಂಪ್ರದಾಯಗಳು ಶತ ಶತಮಾನಗಳಷ್ಟು ಹಳೆಯದ್ದಾಗಿದ್ದು, ಈ ಪೈಕಿ ತಮಿಳಿನ ಸಾಹಿತ್ಯ ಅತ್ಯಂತ ಪುರಾತನವಾದದ್ದು ಎಂದು ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನ ವರದಿ ತಿಳಿಸಿದೆ. 
ಸಂಸ್ಕೃತದೊಂದಿಗೆ ತಮಿಳು ಸಹ ವಿಶ್ವದ ಸಾಂಪ್ರದಾಯಿಕ ಭಾಷೆಗಳಲ್ಲಿ ಒಂದಾಗಿದ್ದು, ಸಂಸ್ಕೃತದಂತಲ್ಲದೇ ತಮಿಳಿನ ಸಾಹಿತ್ಯ ಹಾಗೂ ಶಾಸನಗಳು ಸಾಂಪ್ರದಾಯಿಕ ಹಾಗೂ  ಆಧುನಿಕ ರೂಪಗಳ ನಡುವೆ ನಿರಂತರತೆಯನ್ನು ಹೊಂದಿದೆ ಎಂದು ಅಧ್ಯಯನ ವರದಿ ಹೇಳಿದೆ. 
ಇತರ ಭಾಷೆಗಳ ಗುಂಪಿನ ಮೇಲೆ ಪ್ರಭಾವ ಬೀರಿರುವ ಹಿನ್ನೆಲೆಯಲ್ಲಿ ದ್ರಾವಿಡ ಭಾಷೆಗಳ ಅಧ್ಯಯನ ಯುರೇಷಿಯಾದ ಪೂರ್ವ ಇತಿಹಾಸ ತಿಳಿಯುವುದಕ್ಕೆ ಸಹಕಾರಿ ಎಂದು ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ನ ಮಾನವ ವಿಜ್ಞಾನದ ಇತಿಹಾಸ ವಿಭಾಗದ  ಅನ್ನಮೆರಿ ವರ್ಕರ್ಕ್ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com