ಬಿಜೆಪಿಯ ಸುಳ್ಳು ಕಾರ್ಖಾನೆ ಮತ್ತೆ ಕೆಲಸ ಆರಂಭಿಸಿದೆ: ರಾಹುಲ್ ಗಾಂಧಿ ವ್ಯಂಗ್ಯ

ಬಿಜೆಪಿಯ ಸುಳ್ಳು ಕಾರ್ಖಾನೆ ಮತ್ತೆ ಕೆಲಸ ಆರಂಭಿಸಿದ್ದು ಕೇಂಬ್ರಿಡ್ಜ್ ಅನಾಲಿಟಿಕಾ ಜೊತೆ ಸೇರಿಕೊಂಡು ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಬಿಜೆಪಿಯ ಸುಳ್ಳು ಕಾರ್ಖಾನೆ ಮತ್ತೆ ಕೆಲಸ ಆರಂಭಿಸಿದ್ದು ಕೇಂಬ್ರಿಡ್ಜ್ ಅನಾಲಿಟಿಕಾ ಜೊತೆ ಸೇರಿಕೊಂಡು ಮತದಾರರ ಹಾದಿತಪ್ಪಿಸಲು ಯತ್ನಿಸುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದೆ. ಈ ಮೂಲಕ ಮಾಧ್ಯಮಗಳಲ್ಲಿ ಬರುವ ಸತ್ಯವಾದ ವಿಚಾರಗಳನ್ನು ತಡೆಹಿಡಿಯಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಮತ್ತೆ ಗಂಭೀರ ಆರೋಪ ಮಾಡಿದ್ದಾರೆ.

ಅವರು ನಿನ್ನೆ ಮಾತನಾಡಿದಲ್ಲಿಂದ ಮುಂದುವರಿದು ಇಂದು, ಮತ್ತೆ ಬಿಜೆಪಿ ವಿರುದ್ಧ ಆರೋಪಿಸಿದ್ದು ಫೇಸ್ ಬುಕ್ ನಿಂದ ಬಳಕೆದಾರರ ದಾಖಲೆಗಳನ್ನು ಕದ್ದು ವಿವಾದಿತ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಜೊತೆ ಕಾಂಗ್ರೆಸ್ ಕೈಜೋಡಿಸಿದೆ ಎಂದು ಆರೋಪಿಸುವ ಮೂಲಕ ಸತ್ಯ ಸುದ್ದಿ ಮರೆಮಾಚುವಂತೆ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಬಿಜೆಪಿ ಸುಳ್ಳು ಹೇಳುವ ಕಾರ್ಖಾನೆಯ ರೀತಿ ಮತ್ತೆ ಕೆಲಸ ಆರಂಭಿಸಿದೆ. 2012ರಲ್ಲಿ ಕಾಂಗ್ರೆಸ್ ಪಕ್ಷವನ್ನು ಧ್ವಂಸ ಮಾಡಲು ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ ಬಿಜೆಪಿ ಹಣ ನೀಡಿತ್ತು ಎಂದು ಪತ್ರಕರ್ತರು ಹೊರಹಾಕಲಿದ್ದ ದೊಡ್ಡ ಸುದ್ದಿಯನ್ನು ಬಿಜೆಪಿ ತಡೆಹಿಡಿದಿದೆ.

ತಮ್ಮ ಸಂಪುಟ ಸಚಿವರು ಸುಳ್ಳು ಸುದ್ದಿ ಹೇಳುವಂತೆ ಪ್ರೇರೇಪಿಸಿದರು. ಆಗ ಬಿಜೆಪಿಯ ಕೇಂದ್ರ ಸಚಿವರೇ ಆದ ರವಿಶಂಕರ್ ಪ್ರಸಾದ್ ಸುಳ್ಳು ಸುದ್ದಿ ನೀಡಿ ಕಾಂಗ್ರೆಸ್ ಕೇಂಬ್ರಿಡ್ಜ್ ಅನಾಲಿಟಿಕಾ ಜೊತೆ ಕೈಜೋಡಿಸಿದೆ ಎಂದು ಹೇಳಿಬಿಟ್ಟರು. ಈ ಮಧ್ಯೆ ನಿಜವಾದ ಕಥೆ ಮುಚ್ಚಿಹೋಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಆಪಾದನೆ ಮಾಡಿದ್ದಾರೆ.

ಅಲ್ಲದೆ ಮಾಧ್ಯಮ ವರದಿಯನ್ನು ಕೂಡ ತಮ್ಮ ಟ್ವೀಟ್ ಗೆ ಟ್ಯಾಗ್ ಮಾಡಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ಫೇಸ್ ಬುಕ್ ಮೂಲಕ ವಿವಾದಿತ ಕೇಂಬ್ರಿಡ್ಜ್ ಅನಾಲಿಟಿಕಾ ಕಂಪೆನಿ ಜೊತೆ ಸೇರಿಕೊಂಡು ಮತದಾರರ ದಾರಿ ತಪ್ಪಿಸಲಾಗಿತ್ತು ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಕಳೆದೊಂದು ವಾರದಿಂದ ಪರಸ್ಪರ ಆರೋಪಗಳ ತೂಗುಯ್ಯಾಲೆಯಾಟ ಆಡುತ್ತಿವೆ.
ಇರಾಕ್ ನಲ್ಲಿ 39 ಭಾರತೀಯರ ಸಾವಿನ ವಿಷಯವನ್ನು ಮರೆಮಾಚಿ ಜನರ ಗಮನ ಬೇರೆಡೆಗೆ ಸೆಳೆಯಲು ಮಾಧ್ಯಮಗಳಲ್ಲಿ ಕೇಂಬ್ರಿಡ್ಜ್ ಅನಾಲಿಟಿಕಾ ವಿಷಯ ವಿಜೃಂಭಿಸುವಂತೆ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com