ನೋಟುಗಳ ಅಮಾನ್ಯತೆಗೆ 500 ದಿನಗಳು: ದುಡುಕು ಬುದ್ದಿಯ ಕುರಿಗೆ ಪ್ರಧಾನಿಯನ್ನು ಹೋಲಿಸಿದ ಕಾಂಗ್ರೆಸ್

ಅಧಿಕ ಮೌಲ್ಯದ ನೋಟುಗಳ ಚಲಾವಣೆ ರದ್ದುಗೊಂಡು 500 ದಿನಗಳು ಕಳೆದಿರುವ ಸಂದರ್ಭದಲ್ಲಿ ...
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ

ನವದೆಹಲಿ: ಅಧಿಕ ಮೌಲ್ಯದ ನೋಟುಗಳ ಚಲಾವಣೆ ರದ್ದುಗೊಂಡು  500 ದಿನಗಳು ಕಳೆದಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ದುಡುಕುಬುದ್ದಿಯ ಕುರಿಗೆ ಹೋಲಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಪಕ್ಷ, ಭಾರತದ ಇತಿಹಾಸ ಕಂಡ ಅತ್ಯಂತ ದೊಡ್ಡ ವಿಪತ್ತುಗಳಲ್ಲಿ ಒಂದಾದ ನೋಟುಗಳ ಅಮಾನ್ಯತೆಗೊಂಡು ಇಂದಿಗೆ 500 ದಿನಗಳು ಕಳೆದಿವೆ. ಈ ದಿನ ದೇಶದ ಮುಗ್ಧ ಜನರು ತಮ್ಮ ಜೀವನವನ್ನು ಕಳೆದುಕೊಂಡರು. ಇದಕ್ಕೆ ಕಾರಣ ಒಬ್ಬ ವ್ಯಕ್ತಿಯ ಆತುರದ ಚಪಲ ಬುದ್ದಿಯಿಂದಾಗಿ ಅದು ನೋಟುಗಳ ಅನಾಣ್ಯೀಕರಣ.

ನೋಟುಗಳ ಚಲಾವಣೆ ರದ್ದು ನಮ್ಮನ್ನು ಕುರಿಯನ್ನು ನೆನಪಿಸುತ್ತದೆ. ಯಜಮಾನ ಹೊದಿಕೆ ನೀಡುವಾಗ ಖುಷಿಯಾಗುವ ಕುರಿಯಂತೆ. ಅದು ಎಲ್ಲಿಯವರೆಗೆ ಖುಷಿ ಇತ್ತು ಎಂದರೆ ಒಂದು ಕುರಿ ಈ ಉಣ್ಣೆ ಎಲ್ಲಿಂದ ಬರುತ್ತದೆ ಎಂದು ಕೇಳುವಲ್ಲಿಯವರೆಗೆ ಆ ಖುಷಿ ಉಳಿದಿರುತ್ತದೆ ಎಂದು ಮೆರ್ವಿನ್ ಫೆರ್ರವೊ ಮಾತನ್ನು ಉಲ್ಲೇಖಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com