10 ಕೋಟಿ ರೂ ಉಂಗುರ, 1.40 ಕೋಟಿ ರೂ ವಾಚು: ನೀರವ್ ಮೋದಿಯ ಮನೆ ಮೇಲೆ ದಾಳಿ ನಡೆಸಿದಾಗ ಸಿಕ್ಕಿದ ವಸ್ತುಗಳು!

ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಉದ್ಯಮಿ ನೀರವ್ ಮೋದಿಯವರ ವೊರ್ಲಿಯವರ ಸಮುದ್ರ ಮಹಲ್ ನಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮುಂಬೈ: ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಉದ್ಯಮಿ ನೀರವ್ ಮೋದಿಯವರ ವೊರ್ಲಿಯಲ್ಲಿರುವ ಸಮುದ್ರ ಮಹಲ್  ನಿವಾಸದ ಮೇಲೆ ಸತತ ಮೂರು ದಿನಗಳ ಶೋಧ ಕಾರ್ಯಾಚರಣೆ ನಡೆಸಿ ಕೋಟ್ಯಂತರ ರೂಪಾಯಿ ಸಂಪತ್ತನ್ನು ವಶಪಡಿಸಿಕೊಂಡಿದೆ.

ಶೋಧತಂಡ ವಶಪಡಿಸಿಕೊಂಡಿರುವ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಅವುಗಳಲ್ಲಿ 10ಕೋಟಿ ರೂಪಾಯಿ ಬೆಲೆಬಾಳುವ ಉಂಗುರ, 1.40 ಕೋಟಿ ರೂಪಾಯಿಗಳ ವಾಚು ಅಧಿಕಾರಿಗಳ ಹುಬ್ಬೇರಿಸುವಂತೆ ಮಾಡಿವೆ. ಹಳೆಯ ಆಭರಣಗಳು ಮತ್ತು ಅಪರೂಪದ ಕಲಾಕೃತಿಗಳು ಲಕ್ಷಾಂತರ ರೂಪಾಯಿಗಳಿಂದ ಹಲವಾರು ಕೋಟಿ ರೂಪಾಯಿಗಳವರೆಗೆ ಬಲೆಬಾಳುವ ವಸ್ತುಗಳಾಗಿವೆ, ನೀರವ್ ಮೋದಿ ಕಂಪೆನಿಯಲ್ಲಿ ಸಿಕ್ಕಿದ ವಸ್ತುಗಳನ್ನು ಪಟ್ಟಿ ಮಾಡಿರುವ ಅಧಿಕಾರಿಗಳು ಕನಿಷ್ಟವೆಂದರೂ 50 ಕೋಟಿ ರೂಪಾಯಿಗಳಿಗಿಂತಲೂ ಅಧಿಕವಾಗಬಹುದು ಎಂದು ಅಂದಾಜಿಸಿದ್ದಾರೆ.

ಮುಂಬೈಯ ವೊರ್ಲಿಯಲ್ಲಿರುವ ಸಮುದ್ರ ಮಹಲ್ ನೀರವ್ ಮೋದಿಗೆ ಸೇರಿರುವ ವಸತಿ ಆಸ್ತಿಯಾಗಿದೆ. ಶತಕೋಟಿ ರೂಪಾಯಿಗಳ ಆಭರಣ ಉದ್ಯಮದ ಒಡೆಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಇದೀಗ ತಲೆಮರೆಸಿಕೊಂಡಿದ್ದಾರೆ. ನೀರವ್ ಮೋದಿ, ಅವರ ಸಂಬಂಧಿ ಮೆಹುಲ್ ಚೊಕ್ಸಿ ಮತ್ತು ಇನ್ನೂ ಕೆಲವರ ವಿರುದ್ಧ ಸಿಬಿಐ, ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಆರಂಭದಲ್ಲಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 11,400 ಕೋಟಿ ರೂಪಾಯಿ ವಂಚಿಸಿದರು ಎಂದು ಹೇಳಲಾಗಿತ್ತಾದರೂ ತನಿಖೆಯ ಬಳಿಕ ಆ ಮೊತ್ತ 13,900 ಕೋಟಿಗೆ ಏರಿಕೆಯಾಗಿದೆ. ಹಗರಣ ಬೆಳಕಿಗೆ ಬರುವ ಮೊದಲೇ ನೀರವ್ ಮೋದಿ ಮತ್ತು ಮೆಹಲ್ ಚೊಕ್ಸಿ ದೇಶ ಬಿಟ್ಟು ಹೋಗಿದ್ದಾರೆ.

ಕಳೆದ ತಿಂಗಳು ಜಾರಿ ನಿರ್ದೇಶನಾಲಯ ನೀರವ್ ಮೋದಿಯ 21 ಆಸ್ತಿಗಳ ವಿವರಗಳನ್ನು ಲಗತ್ತಿಸಿದ್ದು ಅವುಗಳಲ್ಲಿ ಫಾರ್ಮ್ ಹೌಸ್ ಮತ್ತು ಪೆಂಟ್ ಹೌಸ್ ಗಳು ಸೇರಿವೆ. ಇವುಗಳ ಬೆಲೆ ಒಟ್ಟಾರೆ 523 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈಗಾಗಲೇ ಇಬ್ಬರಿಗೂ ಹಲವು ಬಾರಿ ಸಮ್ಮನ್ಸ್ ಜಾರಿ ಮಾಡಿದರೂ ಕೂಡ ಉತ್ತರ ನೀಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com