2025ರೊಳಗೆ ದೇಶವನ್ನು ಟಿಬಿ ಮುಕ್ತಗೊಳಿಸಲು ಸಹಕರಿಸಿ, ವಿಶ್ವ ಟಿಬಿ ದಿನದಂದು ರಾಷ್ಟ್ರಪತಿ, ಪ್ರಧಾನಿ ಕರೆ

ಇಂದು ವಿಶ್ವ ಕ್ಷಯರೋಗ (ಟಿಬಿ) ದಿನ. 2025ರೊಳಗೆ ದೇಶವನ್ನು ಕ್ಷಯರೋಗ ಮುಕ್ತಗೊಳಿಸಬೇಕೆಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ವಿಶ್ವ ಟಿಬಿ ದಿನ - ಸಾಂದರ್ಭಿಕ ಚಿತ್ರ
ವಿಶ್ವ ಟಿಬಿ ದಿನ - ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಇಂದು ವಿಶ್ವ ಕ್ಷಯರೋಗ (ಟಿಬಿ) ದಿನ. 2025ರೊಳಗೆ ದೇಶವನ್ನು ಕ್ಷಯರೋಗ ಮುಕ್ತಗೊಳಿಸಬೇಕೆಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
"ವಿಶ್ವ ಕ್ಷಯರೋಗ ದಿನವಾದ ಇಂದು ಕ್ಷಯರೋಗವನ್ನು ಎದುರಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕೆಂದು ನಾನು ಬಯಸುತ್ತೇನೆ. ಟಿಬಿ ನಮ್ಮ ದೇಶದ ಬಹುದೊಡ್ಡ  ಸಾರ್ವಜನಿಕ ಆರೋಗ್ಯ ಸವಾಲುಗಳಲ್ಲೊಂದಾಗಿದೆ.  2025ರೊಳಗೆ ದೇಶದಿಂದ ಈ ರೋಗವನ್ನು ಸಂಪೂರ್ಣವಾಗಿ ತೊಡೆದುಹಾಕಲು ನಾವೆಲ್ಲಾ ಕೈ ಜೋಡ್ಸಿಸಿ ದುಡಿಯಬೇಕಾದ ಸಮಯ ಬಂದಿದೆ" ರಾಷ್ಟ್ರಪತಿ ಕೋವಿಂದ್ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.
"ವಿಶ್ವ ಟಿಬಿ ದಿನದ ಈ ಸಮಯದಲ್ಲಿ ’ವಾಂಟೆಡ್ ಲೀಡರ್ಸ್ ಫಾರ್ ಎ ಟಿಬಿ ಫ್ರೀ ವರ್ಲ್ಡ್’ ಆಶಯ ಹೊಂದಿದ್ದೇವೆ. ಇದಕ್ಕಾಗಿ ಟಿಬಿಯನ್ನು ತೊಡೆದು ಹಾಕಲು ನಾಗರಿಕರು ಮತ್ತು ಸಂಘಟನೆಗಳು ಒಟ್ಟಾಗಿ ಚಳವಳಿಯಲ್ಲಿ ಪಾಲ್ಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. ಟಿಬಿ ಮುಕ್ತ ಪ್ರಪಂಚವು ಮಾನವೀಯತೆಯ ಅದ್ಭುತ ಕೊಡುಗೆಯಾಗಲಿದೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಭಾರತವನ್ನು ಟಿಬಿ ಮುಕ್ತ ರಾಷ್ಟ್ರವಾಗಿಸುವುದಕ್ಕೆ ಸರ್ಕಾರ ಶ್ರಮಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಟಿಬಿ ನಿರ್ಮೂಲನೆಗಾಗಿ ಜಗತ್ತು 2030ರ ಗುರಿ ಹೊಂದಿದೆ. ಆದರೆ ನಾವು ಅದನ್ನು 2025ರ ವೇಳೆಗೆ ಸಾಧಿಸಬಯಸುತ್ತೇವೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಟಿಬಿ ಕುರಿತಾದ ಶೃಂಗಸಭೆಯಲ್ಲಿ ಸಹ ಣಾನು ಇದನ್ನೇ ಹೇಳಿದ್ದೇನೆ ಎಂದು ಮೋದಿ ಹೇಳಿದರು.
ಕ್ಷಯರೋಗದಿಂದ ಉಂಟಾಗುವ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ಸಾರ್ವಜನಿಕ ಅರಿವು ಮೂಡಿಸಲು ಮತ್ತು ಜಾಗತಿಕ ಸಾಂಕ್ರಾಮಿಕ ರೋಗವನ್ನು ತೊಡೆದುಹಾಕಲು ಪ್ರಯತ್ನಗಳನ್ನು ಕೈಗೊಳ್ಳಬೇಕಿರುವ ಕಾರಣ  ವಿಶ್ವ ಟಿಬಿ ದಿನವನ್ನು ಆಚರಿಸಲಾಗುತ್ತದೆ. 1882 ರಲ್ಲಿ ರಾಬರ್ಟ್ ಕೊಚ್ ಎನ್ನುವವರು ಮೊಟ್ಟ ಮೊದಲ ಬಾರಿಗೆ ಈ ರೋಗವನ್ನು ಪತ್ತೆ ಮಾಡಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com