ಮೋದಿ ನಮೋ ಆಪ್ ಬಳಕೆದಾರರ ಡಾಟಾವನ್ನು ಅಮೆರಿಕ ಸಂಸ್ಥೆಗಳಿಗೆ ನೀಡುತ್ತಿದ್ದಾರೆ: ರಾಹುಲ್ ಗಾಂಧಿ

ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯ ಡಾಟಾ ದುರ್ಬಳಕೆ ವಿಷಯವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪರಸ್ಪರ ವಾಗ್ದಾಳಿ ನಡೆಸಿದ ಬಳಿಕ ಈಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ಮತ್ತೊಂದು ಗಂಭೀರ
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ನವದೆಹಲಿ: ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯ ಡಾಟಾ ದುರ್ಬಳಕೆ ವಿಷಯವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪರಸ್ಪರ ವಾಗ್ದಾಳಿ ನಡೆಸಿದ ಬಳಿಕ ಈಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. 
ಫ್ರೆಂಚ್ ವಿಜಿಲೆಂಟ್ ಹ್ಯಾಕರ್ ಟ್ವೀಟ್ ಬಗ್ಗೆ ಮಾಧ್ಯಮದ ವರದಿಯೊಂದನ್ನು ಆಧಾರವಾಗಿಟ್ಟುಕೊಂಡು ರಾಹುಲ್ ಗಾಂಧಿ ಆರೋಪ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ನಮೋ ಆಪ್ ನ ಬಳಕೆದಾರರ ಡಾಟಾವನ್ನು ಅಮೆರಿಕ ಸಂಸ್ಥೆಗಳಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 
ವ್ಯಂಗ್ಯ ಧಾಟಿಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, " ನನ್ನ ಹೆಸರು ನರೇಂದ್ರ ಮೋದಿ, ನಾನು ಭಾರತದ ಪ್ರಧಾನಿ. ನನ್ನ ಅಧಿಕೃತ ಆಪ್ ಗೆ ಸೈನ್ ಅಪ್ ಮಾಡಿದರೆ ನಿಮ್ಮ ಎಲ್ಲಾ ಡಾಟಾ ಮಾಹಿತಿಯನ್ನು ನನ್ನ ಅಮೆರಿಕ ಸಂಸ್ಥೆಯ ಸ್ನೇಹಿತರಿಗೆ ರವಾನಿಸುತ್ತೇನೆ" ಎಂದು ಬರೆದಿದ್ದಾರೆ. 
2019 ರ ಲೋಕಸಭಾ ಚುನಾವಣೆ ಗೆಲ್ಲಲು ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯ ಸಹಾಯ ಪಡೆದಿರುವ ಕಾಂಗ್ರೆಸ್, ದೇಶದ  ಭದ್ರತೆಯೊಂದಿಗೆ ರಾಜೀ ಮಾಡಿಕೊಂಡಿದೆ ಎಂದು ಬಿಜೆಪಿ ಆರೋಪಿಸಿತ್ತು. ಈ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ವಿರುದ್ಧ ಆರೋಪ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com