ಡೋಕ್ಲಾಮದಲ್ಲಿ ಯಾವುದೇ ಅನಿರೀಕ್ಷಿತ ಪರಿಸ್ಥಿತಿ ಎದುರಿಸಲು ಸಿದ್ಧ- ನಿರ್ಮಲಾ ಸೀತಾರಾಮನ್

ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ವಿವಾದಿತ ಡೋಕ್ಲಾಮ ಪ್ರದೇಶದಲ್ಲಿ ಯಾವುದೇ ಅನಿರೀಕ್ಷಿತ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿರುವುದಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ಡೆಹ್ರಾಡೂನ್  : ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು   ವಿವಾದಿತ ಡೋಕ್ಲಾಮ ಪ್ರದೇಶದಲ್ಲಿ ಯಾವುದೇ ಅನಿರೀಕ್ಷಿತ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿರುವುದಾಗಿ  ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಪರಿಸ್ಥಿತಿ ಎದುರಿಸಲು ಸಿದ್ದರಿರುವಂತೆ ಸೈನಿಕರಿಗೆ ಸೂಚಿಸಲಾಗಿದೆ. ನಮ್ಮ ಸೈನ್ಯವನ್ನು ಆಧುನಿಕ ರೀತಿಯಲ್ಲಿ ಸಜ್ಜುಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದಾಗಿ ಅವರು ತಿಳಿಸಿದ್ದಾರೆ.

ಡೋಕ್ಲಾಮ ಪ್ರದೇಶದಲ್ಲಿ ಚೀನಾ ಸೇನಾ ಕಟ್ಟಡ ನಿರ್ಮಾಣ ಕುರಿತ ಭಾರತೀಯ ರಾಯಬಾರಿ ಅಧಿಕಾರಿಯ ಹೇಳಿಕೆ ಬೆನ್ನಲ್ಲೇ ನಿರ್ಮಲಾ ಸೀತಾರಾಮನ್ ಈ ರೀತಿಯ  ಪ್ರತಿಕ್ರಿಯೆ ನೀಡಿದ್ದಾರೆ.

 ಡೋಕ್ಲಾಮ ಭಾರತ ಹಾಗೂ ಚೀನಾ ಸೈನಿಕರಿಗೆ ಸಮೀಪದಲ್ಲಿದ್ದು, ಅಲ್ಲಿಯ ಅಂತಹ ಯಾವುದೇ ಬದಲಾವಣೆಯಾಗುತ್ತಿಲ್ಲ ಎಂದು ಗೌತಮ್ ಬಾಂಬಾವಾಲೆ ಹಾಕ್ ಹಾಂಗ್ ಮೊಲದ  ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ಗೆ ಸಂದರ್ಶನ ನೀಡಿದ್ದರು.

 ಇತ್ತೀಚಿಗೆ ಡೋಕ್ಲಾಮ ಪ್ರದೇಶದಲ್ಲಿ  ಭಾರತೀಯ ಸೈನಿಕರಿಂದ ಚೀನಾದ ಪಿಎಲ್ ಎ ಸೈನಿಕರೊಬ್ಬರು ತಪ್ಪಿಸಿಕೊಂಡಿರುವ ಬಗ್ಗೆ ವರದಿಯಾಗಿತ್ತು.  ಸಿಕ್ಕಿಂನ ಡೋಕ್ಲಾಮದಲ್ಲಿ ರಸ್ತೆ ನಿರ್ಮಾಣ ಕಾರ್ಯವನ್ನು   ಸ್ಥಗಿತಗೊಳಿಸುವುದಾಗಿ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಚೀನಾ ಒಪ್ಪಿಕೊಂಡಿತ್ತು.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com