ಆಧಾರ್ ಮಾಹಿತಿ ಸೋರಿಕೆ ವರದಿ ನಿರಾಕರಿಸಿದ ಯುಐಡಿಎಐ : ಮಾಹಿತಿ ಸುರಕ್ಷಿತ ಎಂದು ಹೇಳಿಕೆ

ಆಧಾರ್ ಮಾಹಿತಿ ಸೋರಿಕೆ ವರದಿಯನ್ನು ಭಾರತೀಯ ವಿಶಿಷ್ಠ ಗುರುತು ಪ್ರಾಧಿಕಾರ- ಯುಐಡಿಎಐ ನಿರಾಕರಿಸಿದ್ದು, ಮಾಹಿತಿಯಲ್ಲಿ ಡೇಟಾಬೇಸ್ ನಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಆಧಾರ್ ಗುರುತಿನ ಚೀಟಿ
ಆಧಾರ್ ಗುರುತಿನ ಚೀಟಿ

ನವದೆಹಲಿ : ಆಧಾರ್ ಮಾಹಿತಿ ಸೋರಿಕೆ ವರದಿಯನ್ನು ಭಾರತೀಯ ವಿಶಿಷ್ಠ ಗುರುತು ಪ್ರಾಧಿಕಾರ- ಯುಐಡಿಎಐ ನಿರಾಕರಿಸಿದ್ದು, ಡೇಟಾಬೇಸ್  ಮಾಹಿತಿಯಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಆಧಾರ್ ಖಾತೆದಾರರ ಮಾಹಿತಿ ಸೋರಿಕೆಯಾಗುತ್ತಿದೆ ಎಂದು ಝಡ್ ನೆಟ್ ನ್ಯೂಸ್ ಪೋರ್ಟಲ್ ನಲ್ಲಿ ಇತ್ತೀಚಿಗೆ  ಹೇಳಲಾಗಿತ್ತು. ಈ ಸಂಬಂಧ ನೀಡಿರುವ ಯುಐಡಿಎಐ, ಇಂತಹ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲಾ. ಆಧಾರ್ ಡೇಟಾಬೇಸ್ ನಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ. ಆಧಾರ್ ಮಾಹಿತಿ ಸುರಕ್ಷಿತವಾಗಿದೆ ಎಂದು ಹೇಳಿದೆ.

 ಈ ವಿಚಾರಕ್ಕೆ ಸಂಬಂಧಿಸಿದಂತೆ ಝಡ್ ನೆಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಯುಐಡಿಎಐ ಎಚ್ಚರಿಕೆ ನೀಡಿದೆ.

ರಾಜ್ಯ ಸರ್ಕಾರದ  ಯೂಟಿಲಿಟಿ ಕಂಪನಿ  ಆಧಾರ್ ಗುರುತಿನ ಚೀಟಿಯಲ್ಲಿನ ಬ್ಯಾಂಕ್ ಮಾಹಿತಿ ಸೇರಿದಂತೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಎಂದು ಝಡ್ ನೆಟ್ ವೆಬ್ ಸೈಟ್ ನಲ್ಲಿ ತಿಳಿಸಲಾಗಿತ್ತು.

 ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಯುಐಡಿಎಐ, ಯೂಟಿಲಿಟಿ ಡೇಟಾಬೇಸ್ ಕೂಡಾ ಕಂಪನಿಯ ಗ್ರಾಹಕರ ಖಾತೆ ನಂಬರ್  ಹೊಂದಿದೆ. ಅವರ ಬ್ಯಾಂಕು ಡೇಟಾಬೇಸ್ ಉಲ್ಲಂಘನೆಯಾಗಿದೆ ಎಂದು ಪರಿಣಿಸುತ್ತೀರಾ ಎಂದು ಯುಐಡಿಎಐ ಪ್ರಶ್ನಿಸಿದೆ.

 ಆಧಾರ್ ಡೇಟಾಬೇಸ್  ಸುರಕ್ಷತೆವಾಗಿದ್ದು,  ಬೇರೆಯವರು ಏನೂ ಮಾಡಲು ಸಾಧ್ಯವಿಲ್ಲ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.

ಕೇಂದ್ರಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳು ಆಧಾರ್ ನಲ್ಲಿ ಜೋಡಣೆ  ಕುರಿತಂತೆ ಇತ್ತೀಚಿಗೆ ಯುಐಡಿಎಐ ಸಿಇಓ ಅಜಯ್ ಭೂಷಣ್ ಪಾಂಡೆ ಸುಪ್ರೀಂಕೋರ್ಟಿನಲ್ಲಿ ಪವರ್ ಪಾಯಿಂಟ್ ಪ್ರೆಸೆಂಟೆಷನ್  ಮೂಲಕ ವಿವರಿಸಿದ್ದರು.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com