
ನವದೆಹಲಿ : ಕರ್ನಾಟಕದಲ್ಲಿನ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೆ ಸಂಬಂಧಿಸಿದಂತೆ ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಅಮಿತ್ ಮಾಳವಿಯಾ ತನ್ನ ಟ್ವಿಟ್ ಕುರಿತು ಚುನಾವಣಾ ಆಯೋಗಕ್ಕೆ ವಿವರಣೆ ಸಲ್ಲಿಸಿದ್ದಾರೆ
ಚುನಾವಣಾ ಆಯೋಗಕ್ಕೆ ಪತ್ರದ ಮೂಲಕ ವಿವರಣೆ ನೀಡಿರುವ ಅಮಿತ್ ಮಾಳವಿಯಾ, ಟೈಮ್ಸ್ ನೌ ಬ್ರೇಕಿಂಗ್ ಸುದ್ದಿ ನೋಡಿ ಈ ರೀತಿಯ ಟ್ವೀಟ್ ಮಾಡಿರುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಕರ್ನಾಟಕ ಘಟಕದ ಸಾಮಾಜಿಕ ಜಾಲತಾಣದಲ್ಲಿಯೂ ಇದೇ ರೀತಿಯಲ್ಲಿ ಟ್ವೀಟ್ ಮಾಡಲಾಗಿದೆ. ಚುನಾವಣಾ ಆಯೋಗದ ಕಾರ್ಯವಿಧಾನದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವ ಉದ್ದೇಶ ತಮ್ಮಗಿರಲಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಸಂಬಂಧ ಅಮಿತ್ ಮಾಳವಿಯಾ ಮಾಡಿದ್ದ ಟ್ವೀಟ್ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು.ಚುನಾವಣಾ ಆಯೋಗ ದಿನಾಂಕ ಪ್ರಕಟಿಸುವ ಮೊದಲೇ ಅಮಿತ್ ಮಾಳವಿಯಾಗೆ ಹೇಗೆ ಈ ವಿಷಯ ಗೊತ್ತಿತ್ತು ಎಂದು ಹಲವು ಪತ್ರಕರ್ತರು ಚರ್ಚೆ ನಡೆಸಿದ್ದರು.
Advertisement