ಪಿಎಂಎಲ್ಎ ಪ್ರಕರಣ: ವಿಜಯ್ ಮಲ್ಯ ಆಸ್ತಿ ಮುಟ್ಟುಗೋಲಿಗೆ ದೆಹಲಿ ನ್ಯಾಯಾಲಯ ಆದೇಶ

ಫೆರಾ ಉಲ್ಲಂಘನೆಗೆ ಸಂಬಂಧಿಸಿದಂತೆ ಹಣ ವಂಚನೆ ಪ್ರಕರಣದಲ್ಲಿ ಭಾಗಿಯಾಗಿ ನೋಟೀಸಿನಿಂದ ತಪ್ಪಿಸಿಕೊಂಡಿದ್ದ............
ವಿಜಯ್ ಮಲ್ಯ
ವಿಜಯ್ ಮಲ್ಯ
ನವದೆಹಲಿ: ಫೆರಾ ಉಲ್ಲಂಘನೆಗೆ ಸಂಬಂಧಿಸಿದಂತೆ ಹಣ ವಂಚನೆ ಪ್ರಕರಣದಲ್ಲಿ ಭಾಗಿಯಾಗಿ ನೋಟೀಸಿನಿಂದ  ತಪ್ಪಿಸಿಕೊಂಡಿದ್ದ ’ಘೋಷಿತ ಅಪರಾಧಿ’ ವಿಜಯ್ ಮಲ್ಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ದೆಹಲಿ ನ್ಯಾಯಾಲಯ ಆದೇಶ ನಿಡಿದೆ.
ಬೆಂಗಳೂರು ಪೋಲೀಸ್ ಆಯುಕ್ತರ ಮೂಲಕ ಮಲ್ಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ನ್ಯಾಯಾಲಯದ ಆದೇಶ ಪಾಲನೆ ಸಂಬಂಧ ಮೇ 8ರೊಳಗೆ ವರದಿ ನೀಡಬೇಕು ಎಂದು ಮುಖ್ಯ ಮೆಟ್ರೋಪಾಲಿಟಿನ್ ನ್ಯಾಯಾಧಿಶ ದೀಪಕ್ ಶೇರಾವತ್ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ನಿರ್ದೇಶಿಸಿದ್ದಾರೆ.
ವಿಜಯ್ ಮಲ್ಯ ಆಸ್ತಿ ಮುಟ್ಟುಗೋಲಿಗೆ ಅನುಮತಿ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ಇಂದು ವಿಚಾರಣೆ ನಡೆಸಿದೆ. ವಿದೇಶೀ ವಿನಿಮಯ ನಿಯಂತ್ರಣ ಕಾಯ್ದೆ (ಫೆರಾ) ಉಲ್ಲಂಘನೆ ಪ್ರಕರಣದಲ್ಲಿ ನೋಟೀಸ್ ನಿಂದ ತಪ್ಪಿಸಿಕೊಂಡಿದ್ದ ಮಲ್ಯ ’ಘೋಷಿತ ಅಪರಾಧಿ ಎಂದು ಜನವರಿ 4ರಂದು ನ್ಯಾಯಾಲಯ ಹೇಳಿತ್ತು.
ಕಳೆದ ಏಪ್ರಿಲ್ 12ರಂದು ವಿಜಯ್ ಮಲ್ಯ ವಿರುದ್ಧ ಮುಕ್ತ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು. ಜಾಮೀನು ರಹಿತ ವಾರಂಟ್ ಗಿಂತ ಭಿನ್ನವಾಗಿರುವ ಮುಕ್ತ ಬಂಧನಾದೇಶ ಯಾವ ಕಾಲಮಿತಿಯನ್ನು ಬೇಡುವುದಿಲ್ಲ..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com