ಕಾಂಗ್ರೆಸ್ ಟ್ವೀಟ್
ದೇಶ
ಕಾಂಗ್ರೆಸ್ ಐಟಿ ಸೆಲ್ ನಿಂದಲೂ ಚುನಾವಣಾ ಆಯೋಗಕ್ಕಿಂತ ಮುನ್ನವೇ ದಿನಾಂಕ ಘೋಷಣೆ!
ಕೇಂದ್ರ ಚುನಾವಣಾ ಆಯೋಗ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಮಾಡುವುದಕ್ಕೂ ಮುನ್ನ ಬಿಜೆಪಿ ಐಟಿ ಸೆಲ್ ಚುನಾವಣಾ ದಿನಾಂಕವನ್ನು ಪ್ರಕಟಗೊಳಿಸಿರುವ ಸುದ್ದಿ ವೈರಲ್ ಆಗುತ್ತಿರುವೆ....
ನವದೆಹಲಿ: ಕೇಂದ್ರ ಚುನಾವಣಾ ಆಯೋಗ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಮಾಡುವುದಕ್ಕೂ ಮುನ್ನ ಬಿಜೆಪಿ ಐಟಿ ಸೆಲ್ ಚುನಾವಣಾ ದಿನಾಂಕವನ್ನು ಪ್ರಕಟಗೊಳಿಸಿರುವ ಸುದ್ದಿ ವೈರಲ್ ಆಗುತ್ತಿರುವೆ ಬೆನ್ನಲ್ಲೇ ಕಾಂಗ್ರೆಸ್ ಐಟಿ ಸೆಲ್ ಕೂಡಾ ಇದೇ ಕೆಲಸ ಮಾಡಿರುವುದು ಬೆಳಕಿಗೆ ಬಂದಿದೆ.
ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಸ್ತುವಾರಿ ಶ್ರೀವತ್ಸ ಸಹ ಚುನಾವಣಾಅ ಆಯೋಗಕ್ಕೂ ಮುನ್ನವೇ ಟ್ವೀಟ್ ಮಾಡಿದ್ದಾರೆ. ಬೆಳಿಗ್ಗೆ 11:08 ಕ್ಕೆ ಟ್ವೀಟ್ ಮಾಡಿರುವ ಟ್ವೀಟ್ ನ್ನು ಈಗ ಡಿಲೀಟ್ ಮಾಡಲಾಗಿದ್ದು, ಚುನಾವಣಾ ದಿನಾಂಕವನ್ನು ತಪ್ಪಾಗಿ ಟ್ವೀಟ್ ಮಾಡಿದ್ದರು.
ಸ್ಥಳೀಯ ಮಾಧ್ಯಮಗಳು ಹಾಗೂ ರಾಷ್ಟ್ರೀಯ ಮಾಧ್ಯಮಗಳ ಬ್ರೇಕಿಂಗ್ ನ್ನು ಆಧರಿಸಿ ಟ್ವೀಟ್ ಮಾಡಿರುವುದಾಗಿ ಶ್ರೀವತ್ಸ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ