ತಿರುವನಂತಪುರ: ರೇಡಿಯೋ ಜಾಕಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.
36 ವರ್ಷದ ರಾಜೇಶ್ ಕೊಲೆಯಾದ ರೇಡಿಯೋ ಜಾಕಿ. ಅವರು ರೆಡ್ ಎಫ್.ಎಂ. ಮೂಲಕ ಜನಪ್ರಿಯರಾಗಿದ್ದರು.ತಮ್ಮ ಸ್ನೇಹಿತನ ಜೊತೆ ರೇಡಿಯೋ ಸ್ಚೇಷನ್ ನಲ್ಲಿ ಕುಳಿತಿದ್ದಾಗ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಈ ಹತ್ಯೆ ನಡೆದಿದೆ.
ರಾಜೇಶ್ ಮತ್ತು ಆತನ ಸ್ನೇಹಿತ ಯಾವುದೋ ಕಾರ್ಯಕ್ರಮ ಮುಗಿಸಿ ವಾಪಸ್ ಸ್ಟುಡಿಯೋ ಗೆ ಬಂದಿದ್ದರು.ಕೆಂಪು ಬಣ್ಣದ ಮಾರುತಿ ಸ್ವಿಪ್ಟ್ ಕಾರಿನಲ್ಲಿ ಬಂದ ಅಪರಿಚಿತರು,ಹರಿತವಾದ ಆಯುಧಗಳಿಂದ ಇರಿದಿದ್ದಾರೆ. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ರಾಜೇಶ್ ಸಾವನ್ನಪ್ಪಿದ್ದಾನೆ.