ಜೆಡಿಯು ಸೇರಿ ಭಾರತದ ಹಲವು ರಾಜಕೀಯ ಪಕ್ಷಗಳ ಪರ ಕೇಂಬ್ರಿಡ್ಜ್ ಅನಾಲಿಟಿಕಾ ಕೆಲಸ: ಕ್ರಿಸ್ಟೋಫರ್ ವೈಲೀ

ರಾಜಕೀಯ ಉದ್ದೇಶಕ್ಕಾಗಿ ಫೇಸ್ ಬುಕ್ ಗ್ರಾಹಕರ ದತ್ತಾಂಶವನ್ನು ಅಕ್ರಮವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದ....
ಕ್ರಿಸ್ಟೋಫರ್ ವೈಲೀ
ಕ್ರಿಸ್ಟೋಫರ್ ವೈಲೀ
Updated on
ನವದೆಹಲಿ: ರಾಜಕೀಯ ಉದ್ದೇಶಕ್ಕಾಗಿ ಫೇಸ್ ಬುಕ್ ಗ್ರಾಹಕರ ದತ್ತಾಂಶವನ್ನು ಅಕ್ರಮವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದ ಕೇಂಬ್ರಿಡ್ಜ್ ಅನಾಲಿಟಿಕಾದ ಮಾಜಿ ಉದ್ಯೋಗಿ, ಕ್ರಿಸ್ಟೋಫರ್ ವೈಲಿ ಅವರು, ಕೇಂಬ್ರಿಡ್ಜ್ ಅನಾಲಿಟಿಕಾ ಭಾರತದಲ್ಲಿ ಶಾಖೆಗಳನ್ನು ಹೊಂದಿದ್ದು, ಜೆಡಿಯು ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಪರವಾಗಿ ಚುನಾವಣಾ ಅಧ್ಯಯನ ನಡೆಸಿದೆ ಎಂದು ಬುಧವಾರ ಹೇಳಿದ್ದಾರೆ.
ಕೇಂಬ್ರಿಡ್ಜ್ ಅನಾಲಿಟಿಕಾ ಮಾತೃ ಸಂಸ್ಥೆ ಎಸ್ ಸಿಎಲ್ ಗಾಜಿಯಾಬಾದ್ ಇಂದಿರಾಪುರಂನಲ್ಲಿ ಮುಖ್ಯ ಕಚೇರಿಯನ್ನು ಹೊಂದಿದ್ದು, ಅಹಮದಾಬಾದ್, ಬೆಂಗಳೂರು, ಕಟಕ್, ಗುವಾಹತಿ, ಹೈದರಾಬಾದ್, ಇಂದೋರ್, ಕೋಲ್ಕತಾ ಮತ್ತು ಪುಣೆಯಲ್ಲಿ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ ಎಂದು ವೈಲೀ ತಿಳಿಸಿದ್ದಾರೆ.
ಮಾಹಿತಿಗಾಗಿ ಭಾರತೀಯ ಪತ್ರಕರ್ತರಿಂದ ನನಗೆ ಸಾಕಷ್ಟು ಮನವಿಗಳು ಬರುತ್ತಿದ್ದು, ಎಸ್ ಸಿಎಲ್ ಭಾರತದಲ್ಲಿ ಈ ಹಿಂದೆ ಮಾಡಿದ ಕೆಲವು ಯೋಜನೆಗಳು ಈ ರೀತಿಯಾಗಿವೆ ಎಂದು ವೈಲೀ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್‌ ಮಾತ್ರವಲ್ಲ ಇನ್ನೂ ಹಲವಾರು ರಾಜಕೀಯ ಪಕ್ಷಗಳಿಗೆ ನಾವು ಕೆಲಸ ಮಾಡಿದ್ದೇವೆ. ಉತ್ತರ ಪ್ರದೇಶದಲ್ಲಿ ಜಾತಿ ಗಣತಿ ಕೂಡ ಮಾಡಿದ್ದೇವೆ. ಕೆಲವು ಭಾರತೀಯ ಪತ್ರಕರ್ತರ ಕೋರಿಕೆ ಮೇರೆಗೆ ಮಾಹಿತಿ ನೀಡುತ್ತಿದ್ದೇನೆ ಎಂದು ವೈಲೀ ತಿಳಿಸಿದ್ದಾರೆ.
2010ರ ಚುನಾವಣೆಯ ಕಾರ್ಯತಂತ್ರ ರೂಪಿಸಲಾಗಿದೆ. 2012ರಲ್ಲಿ ಉತ್ತರಪ್ರದೇಶದಲ್ಲಿ ಜಾತಿ ಗಣತಿ ಕೂಡ ಮಾಡಲಾಗಿದೆ. ಅಲ್ಲದೆ ತಮ್ಮ ಹಳೆ ಕಂಪನಿ ಬಳಿ ಏಳು ಲಕ್ಷ ಗ್ರಾಮಗಳ ಹಾಗೂ 600 ಜಿಲ್ಲೆಗಳ ಡೇಟಾಬೇಸ್‌ ಇದೆ ಎಂದು ವೈಲಿ ಸ್ಪಷ್ಟಪಡಿಸಿದ್ದಾರೆ. 
ಈ ಮುನ್ನ ಭಾರತೀಯ ಕೇಂಬ್ರಿಡ್ಜ್ ಅನಾಲಿಟಿಕಾದ ಸಹಾಯ ಪಡೆದವರಲ್ಲಿ ಭಾರತದ ಕಾಂಗ್ರೆಸ್ ಕೂಡ ಇರಬಹುದು ಎಂದು ಕ್ರಿಸ್ಟೋಫರ್ ಹೇಳಿದ್ದರು.  ನನ್ನ ನಂಬಿಕೆಯ ಪ್ರಕಾರ ಕಾಂಗ್ರೆಸ್ ಪಕ್ಷ ಸಹ ಅವರ ಕ್ಲೈಂಟ್ ಆಗಿದ್ದು, ಕಾಂಗ್ರೆಸ್ ಗಾಗಿ ಕೇಂಬ್ರಿಡ್ಜ್ ಅನಾಲಿಟಿಕ ನಿರ್ವಹಿಸಿದ್ದ ರಾಷ್ಟ್ರೀಯ ಯೋಜನೆಗಳ ಬಗ್ಗೆ ನನಗೆ ತಿಳಿದಿಲ್ಲ, ಆದರೆ ಪ್ರಾದೇಶಿಕ ಮಟ್ಟದಲ್ಲಿ ಯೋಜನೆಗಳನ್ನು ನಿರ್ವಹಿಸಿವೆ, ಭಾರತ ಅತಿ ದೊಡ್ಡ ರಾಷ್ಟ್ರವಾಗಿದ್ದು, ಅಲ್ಲಿನ ಒಂದೊಂದು ರಾಜ್ಯಗಳೇ ಬ್ರಿಟನ್ ದೇಶದಷ್ಟು ದೊಡ್ದದಿವೆ, ಕೇಂಬ್ರಿಡ್ಜ್ ಅನಾಲಿಟಿಕಾ ಕಚೇರಿಗಳು ಅಲ್ಲಿದ್ದು, ಸಿಬ್ಬಂದಿಗಳೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು  ಕ್ರಿಸ್ಟೋಫರ್ ವೈಲೀ  ತಿಳಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com