ಮಹಾ ಸಿಎಂ ಕಚೇರಿಯಲ್ಲಿ ನಿತ್ಯ 18,500 ಕಪ್ ಟೀ ವಿತರಣೆ, 'ಚಹಾ ಹಗರಣ' ಎಂದ ಕಾಂಗ್ರೆಸ್

ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕಚೇರಿಯಲ್ಲಿ ನಿತ್ಯ ಸರಾಸರಿ 18,500 ಕಪ್ ಟೀ ವಿತರಿಸಲಾಗುತ್ತಿದ್ದು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕಚೇರಿಯಲ್ಲಿ ನಿತ್ಯ ಸರಾಸರಿ 18,500 ಕಪ್ ಟೀ ವಿತರಿಸಲಾಗುತ್ತಿದ್ದು, ಇದೊಂದು ದೊಡ್ಜ ಚಹಾ ಹಗರಣ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.
ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರೂಪಮ್ ಅವರು ಆರ್ ಟಿಐ ಕಾಯ್ದೆ ಅಡಿ ಈ ಮಾಹಿತಿ ಪಡೆದಿದ್ದು, ಕಳೆದ ಮೂರು ವರ್ಷಗಳಲ್ಲಿ ಮುಖ್ಯಮಂತ್ರಿಗಳ ಕಚೇರಿಯ ಚಹಾ ಸೇವನೆ ಮೇಲಿನ ಖರ್ಚು ವೆಚ್ಚಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ. 
2015-2016ರಲ್ಲಿ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಚಹಾ ಸೇವನೆಗಾಗಿ 57,99,150 (ಸುಮಾರು 58 ಲಕ್ಷ) ರುಪಾಯಿ ವೆಚ್ಚ ಹಾಗೂ 2017-18ರಲ್ಲಿ 3,34,64.904 (ಸುಮಾರು 3.4 ಕೋಟಿ) ವೆಚ್ಚ ಮಾಡಲಾಗಿದೆ ಎಂದು ಆರ್ ಟಿಐ ಅರ್ಜಿಗೆ ಉತ್ತರ ನೀಡಲಾಗಿದೆ.
ಮುಖ್ಯಮಂತ್ರಿಗಳ ಕಚೇರಿ ನೀಡಿದ ಈ ಮಾಹಿತಿ ಪ್ರಕಾರ ಚಹಾ ಮೇಲಿನ ವೆಚ್ಚ ಬರೋಬ್ಬರಿ ಶೇ.577ರಷ್ಟು ಹೆಚ್ಚಳವಾಗಿದೆ. ಇದರ ಅರ್ಥ ನಿತ್ಯ ಸರಾಸರಿ 18,591 ಕಪ್ ಟೀ ನೀಡಲಾಗಿದೆ. ಇದು ಹೇಗೆ ಸಾಧ್ಯ? ಎಂದು ಕಾಂಗ್ರೆಸ್ ನಾಯಕ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಚಹಾಗಾಗಿ ಇಷ್ಟೊಂದು ವೆಚ್ಚ ಮಾಡಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಅದು ಯಾವ ತರಹದ ಟೀ ಕುಡಿಯುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸಂಜಯ್ ನಿರೂಪಮ್ ಅವರು ಒತ್ತಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com