ಇಸ್ರೊ ನಿರ್ಮಿತ ಜಿಸ್ಯಾಟ್–6ಎ ಸಂವಹನ ಉಪಗ್ರಹ ಉಡಾವಣೆ ಯಶಸ್ವಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಭಾರತೀಯ ಸಂವಹನ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬಲಿರುವ....
ಜಿಸ್ಯಾಟ್–6ಎ, ಉಪಗ್ರಹ ಉಡಾವಣೆ
ಜಿಸ್ಯಾಟ್–6ಎ, ಉಪಗ್ರಹ ಉಡಾವಣೆ
ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಭಾರತೀಯ ಸಂವಹನ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬಲಿರುವ ಜಿಸ್ಯಾಟ್‌-6ಎ ಅನ್ನು ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಇಂದು ಸಂಜೆ 4.56ಕ್ಕೆ ಆಂಧ್ರ ಪ್ರದೇಶದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಭೂಸ್ಥಿರ ಉಪಗ್ರಹ ಉಡಾವಣಾ ವಾಹನ(ಜಿಎಸ್‌ಎಲ್‌ವಿ-ಎಫ್‌08)ದ ಮೂಲಕ ಜಿಸ್ಯಾಟ್–6ಎ ಉಪಗ್ರಹವನ್ನು ಉಡಾವಣೆ ಮಾಡಲಾಯಿತು.
ಒಟ್ಟು 17 ನಿಮಿಷಗಳ ಕಾಲ ಮೂರು ಹಂತಗಳಲ್ಲಿ ನಡೆದ ರಾಕೆಟ್ ಉಡಾವಣೆ ಪ್ರಕ್ರಿಯೆ ಕೊನೆಗೆ ಜಿಸ್ಯಾಟ್-6ಎ ಉಪಗ್ರಹವನ್ನು ಕಕ್ಷೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. 
ಇಸ್ರೊ ನಿರ್ಮಿತ ಎಸ್‌–ಬ್ಯಾಂಡ್‌ ಸಂಪರ್ಕಕ್ಕಾಗಿ ಬಳಕೆಯಾಗುವ ಈ ಉಪಗ್ರಹದ ಕಾರ್ಯಾವಧಿ 10 ವರ್ಷ ಎನ್ನಲಾಗಿದೆ.
ಈ ವರ್ಷ ಇಸ್ರೊ ಉಡಾಯಿಸುತ್ತಿರುವ 2ನೇ ಉಪಗ್ರಹ ಇದಾಗಿದ್ದು, ಎಸ್‌- ಬ್ಯಾಂಡ್‌ ಮಾದರಿಯ ಅತ್ಯಂತ  ಶಕ್ತಿಶಾಲಿ ಸಂವಹನ ಉಪಗ್ರಹ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಉಪಗ್ರಹ ಆಧಾರಿತ ಮೊಬೈಲ್‌ ಸಂಪರ್ಕ ಅಪ್ಲಿಕೇಷನ್‌ಗಳ ಸಮರ್ಥ ಬಳಕೆ ಸೇರಿ ಅನೇಕ ನೂತನ ತಂತ್ರಜ್ಞಾನಗಳ ಅಭಿವೃದ್ಧಿಗೂ ಈ ಉಪಗ್ರಹ ಸಹಕಾರಿಯಾಗಲಿದೆ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್‌ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com