ಏಪ್ರಿಲ್ ನಲ್ಲಿ ಪ್ರಧಾನಿ ಮೋದಿ ಯುಕೆ ಭೇಟಿ: ಬೃಹತ್ ಟೆಲಿಪ್ರಾಸರದ ಕಾರ್ಯಕ್ರಮ ಉದ್ದೇಶಿಸಿ ಭಾಷಣ

ಕಾಮನ್ವೆಲ್ತ್ ರಾಷ್ಟ್ರಗಲ ಗಣ್ಯರ ಸಭೆಯಲ್ಲಿ ಭಾಗವಹಿಸಲು ಮುಂದಿನ ತಿಂಗಳಿನಲ್ಲಿ ಮೂರು ದಿನಗಳ ಕಾಲ ಬ್ರಿಟನ್ ಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ.........
ನರೇಂದ್ರ ಮೋದಿ
ನರೇಂದ್ರ ಮೋದಿ
Updated on
ನವದೆಹಲಿ: ಕಾಮನ್ವೆಲ್ತ್ ರಾಷ್ಟ್ರಗಲ ಗಣ್ಯರ ಸಭೆಯಲ್ಲಿ ಭಾಗವಹಿಸಲು ಮುಂದಿನ ತಿಂಗಳಿನಲ್ಲಿ ಮೂರು ದಿನಗಳ ಕಾಲ ಬ್ರಿಟನ್ ಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ಪ್ರಮುಖ ಜಾಗತಿಕ ಟೆಲಿಪ್ರಸಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
"ಭಾರತ್ ಕಿ ಬಾತ್ ಸಬ್ ಕೆ ಸಾಥ್’ ಎನ್ನುವ ಈ ಕಾರ್ಯಕ್ರಮ ಅತ್ಯಂತ ಪ್ರಮುಖ ಕಾರ್ಯಕ್ರಮ ಎಂದು ಬಿಂಬಿಸಲಾಗಿದೆ. ಈ ಅಭೂತಪೂರ್ವ ಕಾರ್ಯಕ್ರಮವು ಕೇಂದ್ರ ಲಂಡನ್ ನ ಪ್ರಸಾರ ಕೇಂದ್ರದಲ್ಲಿ ಏಪ್ರಿಲ್ 18 ರಂದು ನಡೆಯಲಿದೆ.
Bharatkibaat.org ನಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಕೆಲವು ಅಭ್ಯರ್ಥಿಗಳು ಪ್ರಧಾನ ಮಂತ್ರಿಯೊಂದಿಗೆ ಪ್ರಶ್ನೋತ್ತರ ಅಧಿವೇಶನದಲ್ಲಿ ಭಾಗವಹಿಸುವ ಅವಕಾಶ ಪಡೆಯುತ್ತಾರೆ.
ಏಪ್ರಿಲ್ 18 ರಂದು ಲಂದನ್ ನಲ್ಲಿ ಒಂದು ಅನನ್ಯ ಸಮಾರಂಭವನ್ನು ಆಯೋಜಿಸಲಾಗಿದೆ.’ಭಾರತ್ ಕಿ ಬಾತ್ ಸಬ್ ಕೆ ಸಾಥ್’ ಎಂಬ ಹೆಸರಿನ ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇರವಾದ ಸಂವಾದಕ್ಕೆ ಅವಕಾಶವಿದೆ. ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ವಿದೇಶಾಂಗ ವ್ಯವಹಾರಗಳ ಉಸ್ತುವಾರಿ ವಿಜಯ್ ಚೌತೈವಾಲೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.
ಏಪ್ರಿಲ್ 18ಕ್ಕೆ ಸ್ವೀಡನ್ ನಿಂದ ಲಂಡನ್ ಗೆ ಆಗಮಿಸುವ ಪ್ರಧಾನಿ ಮೋದಿ, ಬ್ರಿಟನ್ ಪ್ರಧಾನಿ  ಥೆರೆಸಾ ಮೇ , ರಾಣಿ ಎಲಿಜಬೆತ್ II ಸೇರಿ ಹಲವು ಉನ್ನತ ನಾಯಕರೊಡನೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.
ಏಪ್ರಿಲ್ 19 ಮತ್ತು 20 ರಂದು, ಕಾಮನ್ವೆಲ್ತ್ ನ 52 ಸದಸ್ಯ ರಾಷ್ಟ್ರಗಳ ಸರ್ಕಾರದ ಮುಖಂಡರೊಂದಿಗೆ ಸಿಎಚ್ ಒಜಿಎಂ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಇದನ್ನು ರಾಜತಾಂತ್ರಿಕ ವಲಯದಲ್ಲಿ ’ಐತಿಹಾಸಿಕ ಭೇಟಿ’ ಎಂದು ಬಣ್ಣಿಸಲಾಗಿದೆ. ಏಕೆಂದರೆ 2010ರ ನಂತರ ಇದೇ ಮೊದಲ ಬಾರಿಗೆ ಸಿಎಚ್ ಒಜಿಎಂ ಶೃಂಗದಲ್ಲಿ ಭಾರತೀಯ ಪ್ರಧಾನಿ ಭಾಗವಹಿಸುತ್ತಿದ್ದಾರೆ. ಮೋದಿ ಅವರನ್ನು ರಾಣಿ ಎಲಿಜಬೆತ್ ತಾವು ಸ್ವತಃ ಪತ್ರ ಬರೆದು ಈ ಸಮಾವೇಶಕ್ಕೆ ಆಹ್ವಾನಿಸಿದ್ದಾರೆ.
ಇದು ಭಾರತಕ್ಕೆ ಉತ್ತಮ ಸಮಯ ಮತ್ತು ಹೊಸ ಅವಕಾಶಗಳಿಗೆ ತೆರೆದುಕೊಳ್ಳಲು ಒಂದು ಅವಕಾಶ. ಎಂದು ಕಾಮನ್ವೆಲ್ತ್ ಸೆಕ್ರೆಟರಿ ಜನರಲ್ ಬ್ಯಾರನೆಸ್ ಪ್ಯಾಟ್ರಿಸಿಯಾ ಸ್ಕಾಟ್ಲ್ಯಾಂಡ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com