ಟೈಮ್ಸ್ ನ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಮೋದಿ, ಸತ್ಯ ನಾದೆಳ್ಲ, ವ್ಲಾದಿಮಿರ್ ಪುಟಿನ್ ಟ್ರಂಪ್

ಟೈಮ್ಸ್ ನ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮೈಕ್ರೋಸಾಫ್ಟ್ ನ ಸಿಇಒ ಸತ್ಯ ನಾದೆಳ್ಲ, ಇತ್ತೀಚೆಗಷ್ಟೇ ಆಯ್ಕೆಯಾದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಇದ್ದಾರೆ.
ಸತ್ಯ ನಾಡೆಳ್ಲ-ನರೇಂದ್ರ ಮೋದಿ
ಸತ್ಯ ನಾಡೆಳ್ಲ-ನರೇಂದ್ರ ಮೋದಿ
ನ್ಯೂಯಾರ್ಕ್: ಟೈಮ್ಸ್ ನ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮೈಕ್ರೋಸಾಫ್ಟ್ ನ ಸಿಇಒ ಸತ್ಯ ನಾದೆಳ್ಲ, ಇತ್ತೀಚೆಗಷ್ಟೇ ಆಯ್ಕೆಯಾದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಇದ್ದಾರೆ. 
ವಾರ್ಷಿಕವಾಗಿ ಬಿಡುಗಡೆ ಮಾಡುವ ವಿಶ್ವದ 100 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ಹಾಗೂ ಭಾರತೀಯ ಮೂಲದ ಮೈಕ್ರೋಸಾಫ್ಟ್ ನ ಸಿಇಒ ಸ್ಥಾನ ಪಡೆದಿದ್ದು ಅಂತಿಮ ಪಟ್ಟಿ ಮುಂದಿನ ತಿಂಗಳು ಪ್ರಕಟವಾಗಲಿದೆ.  ಪ್ರಭಾವಿಗಳ ಪಟ್ಟಿಗೆ ಸಂಬಂಧಿಸಿದಂತೆ ಈಗಾಗಲೇ ಓದುಗರಿಗೆ ಆನ್ ಲೈನ್ ಓಟಿಂಗ್ ಮಾಡುವಂತೆ ಟೈಮ್ಸ್ ಮ್ಯಾಗಜೀನ್  ಕೇಳಿದ್ದು, 
100 ಪ್ರಭಾವಿಗಳ ಪಟ್ಟಿಯ ರೇಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಬಾರಿಯೂ ಸ್ಥಾನ ಪಡೆದಿದ್ದಾರೆ.  2015 ರಿಂದಲೂ ಪ್ರಧಾನಿ ಮೋದಿ ಹೆಸರು ಟೈಮ್ಸ್ ನ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಪ್ರಧಾನಿ ಮೋದಿಗಾಗಿಯೇ ಒಂದು ವ್ಯಕ್ತಿಚಿತ್ರ ಬರಹ ಬರೆದಿದ್ದು ವಿಶೇಷವಾಗಿತ್ತು. 
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್, ಪಾಕಿಸ್ತಾನದ ಮೂಲದ ಅಮೆರಿಕ ನಟ ಕುಮೈಲ್  ನಾಂಜನಿಯ, ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕ ಟ್ರಂಪ್, ಟ್ರಂಪ್ ಅಳಿಯ ಜೇರ್ಡ್ ಕುಶ್ನರ್, ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್, ಅಮೇಜಾನ್ ಮುಖ್ಯಸ್ಥ ಜೆಫ್ ಬೆಜೊಸ್, ಬ್ರಿಟನ್ ರಾಜಮನೆತನದ ಕುಟುಂಬ ಸದಸ್ಯರ ಹೆಸರೂ ಸಹ ಕೇಳಿಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com