ಹನುಮಾನ್ ಜಯಂತಿ ಹಿನ್ನೆಲೆ ರಾಜಸ್ತಾನದಲ್ಲಿ ಇಂಟರ್ ನೆಟ್ ಸಂಪರ್ಕ ಕಡಿತ
ದೇಶ
ಹನುಮಾನ್ ಜಯಂತಿ ಹಿನ್ನೆಲೆ ರಾಜಸ್ತಾನದಲ್ಲಿ ಇಂಟರ್ ನೆಟ್ ಸಂಪರ್ಕ ಕಡಿತ
ಮಾ.31 ರಂದು ಹನುಮಾನ್ ಜಯಂತಿ ಆಚರಣೆ ನಡೆಯಲಿದ್ದು, ರಾಜಸ್ತಾನದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಂಟರ್ ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.
ರಾಜಸ್ತಾನ: ಮಾ.31 ರಂದು ಹನುಮಾನ್ ಜಯಂತಿ ಆಚರಣೆ ನಡೆಯಲಿದ್ದು, ರಾಜಸ್ತಾನದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಂಟರ್ ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.
ಸೂಕ್ಷ್ಮ ಪ್ರದೇಶಗಳಲ್ಲಿ ಕೋಮು ಗಲಭೆಯನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ಹನುಮಾನ್ ಜಯಂತಿ ಆಚರಣೆಗೂ ಮುನ್ನ ಹಿಂದೂ ಹಾಗೂ ಮುಸಲ್ಮಾನ ಸಮುದಾಯದವರು ಹನುಮಾನ್ ಜಯಂತಿ ಆಚರಣೆಯ ವೇಳೆ ಶಸ್ತ್ರಾಸ್ತ್ರಗಳನ್ನು ತರುವುದಾಗಿ ಟ್ವಿಟರ್ ನಲ್ಲಿ ಹೇಳಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.
ಫೇಸ್ ಬುಕ್, ವಾಟ್ಸ್ ಆಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಗೂ ಸಹ ನಿರ್ಬಂಧ ವಿಧಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ