ತೆರಿಗೆ ಪಾವತಿಸದ ಪಂಜಾಬ್ ಸಚಿವ ಸಿಧು ಬ್ಯಾಂಕ್ ಖಾತೆಗಳು ಜಪ್ತಿ

ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಪಂಜಾಬ್ ಸ್ಥಳೀಯ ಸಂಸ್ಥೆ ಮತ್ತು ಪ್ರವಾಸೋದ್ಯಮ ಸಚಿವ, ಮಾಜಿ ಕ್ರಿಕೆಟಿಗ ನವಜೋತ್ ....
ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು
ಚಂಡೀಗಢ: ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಪಂಜಾಬ್ ಸ್ಥಳೀಯ ಸಂಸ್ಥೆ ಮತ್ತು ಪ್ರವಾಸೋದ್ಯಮ ಸಚಿವ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರ ಎರಡು ಬ್ಯಾಂಕ್ ಖಾತೆಯನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ.
2014-15ನೇ ಸಾಲಿನಲ್ಲಿ ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ತೋರಿಸಿದ್ದ ಖರ್ಚು ವೆಚ್ಚಕ್ಕೆ ತೆರಿಗೆ ಪಾವತಿಸದ ಹಿನ್ನಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅವರ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಸಿಧು ಅವರು ತಮ್ಮ ಸಿಬ್ಬಂದಿಗೆ 47.11 ಲಕ್ಷ ವೇತನ ನೀಡಿರುವುದಾಗಿ, ತಮ್ಮ ಪ್ರವಾಸಕ್ಕೆ 38.24 ಲಕ್ಷ ವೆಚ್ಚ, ಬಟ್ಟೆ ಮೇಲೆ 28.38 ಲಕ್ಷ ಹಾಗೂ ಪೆಟ್ರೋಲ್, ಡೀಸೆಲ್ ಗೆ 17.80 ಲಕ್ಷ ವೆಚ್ಚ ಮಾಡಿರುವುದಾಗಿ ರಿಟರ್ನ್ಸ್ ಸಲ್ಲಿಸುವಾಗಿ ಹೇಳಿಕೊಂಡಿದ್ದಾರೆ. ಆದರೆ ಈ ಖರ್ಚು ವೆಚ್ಚಕ್ಕೆ ಪೂರಕವಾದ ಬಿಲ್, ಇನ್ವಾಯ್ಸ್ ಮತ್ತು ಇತರೆ ದಾಖಲೆಗಳನ್ನು ಸಲ್ಲಿಸಲು ವಿಫಲವಾಗಿದ್ದರು.
ವಹಿವಾಟಿನ ದೃಢೀಕರಣ ನೀಡಲು ವಿಫಲವಾದ ಸಿಧು ಅವರಿಗೆ ಆದಾಯ ಸೋರಿಕೆಯನ್ನು ತಡೆಗಟ್ಟಲು ಒಟ್ಟು ವೆಚ್ಚದ ಶೇ. 30ರಷ್ಟು ತೆರಿಗೆ ವಿಧಿಸಲಾಗಿದ್ದು, ಈ ಸಂಬಂಧ ಅವರಿಗೆ ಮೂರು ಬಾರಿ ನೋಟಿಸ್ ಸಹ ನೀಡಲಾಗಿದೆ. ಆದರೂ ತೆರಿಗೆ ಪಾವತಿಸಲು ವಿಫಲವಾದ ಪಂಜಾಬ್ ಸಚಿವರ ಖಾತೆಯನ್ನು ಜಪ್ತಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com