ಮಧ್ಯ ಪ್ರದೇಶ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 62ಕ್ಕೆ ಏರಿಕೆ

ಇನ್ನೇನು ಕೆಲವೇ ದಿನಗಳಲ್ಲಿ ನಿವೃತ್ತರಾಗಲಿರೋ ಮಧ್ಯ ಪ್ರದೇಶ ಸರ್ಕಾರಿ ನೌಕರರಿಗೊಂದು ಗುಡ್ ನ್ಯೂಸ್. ...
ಶಿವರಾಜ್ ಸಿಂಗ್ ಚೌವ್ಹಾಣ್
ಶಿವರಾಜ್ ಸಿಂಗ್ ಚೌವ್ಹಾಣ್
ಭೋಪಾಲ್: ಇನ್ನೇನು ಕೆಲವೇ ದಿನಗಳಲ್ಲಿ ನಿವೃತ್ತರಾಗಲಿರೋ ಮಧ್ಯ ಪ್ರದೇಶ ಸರ್ಕಾರಿ ನೌಕರರಿಗೊಂದು ಗುಡ್ ನ್ಯೂಸ್. ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60ರಿಂದ 62ಕ್ಕೆ ಹೆಚ್ಚಿಸಲಾಗುವುದು ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಶುಕ್ರವಾರ ಘೋಷಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಚೌವ್ಹಾಣ್ ಅವರು, ಬಡ್ತಿಯಲ್ಲಿ ಮೀಸಲಾತಿ ಇರುವುದರಿಂದ ಸಾಮಾನ್ಯ ವರ್ಗದ ನೌಕರರು ಬಡ್ತಿಯಿಂದ ವಂಚಿತರಾಗುತ್ತಿದ್ದಾರೆ. ಹಿರಿತನದ ಆಧಾರದ ಮೇಲೆ ಬಡ್ತಿ ಪಡೆಯುವುದು ಎಲ್ಲಾ ನೌಕರರ ಹಕ್ಕು. ಇದನ್ನು ಗಮನದಲ್ಲಿಟ್ಟುಕೊಂಡು ನಿವೃತ್ತಿ ವಯಸ್ಸನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.
ಸಾಮಾನ್ಯ ವರ್ಗದು ನೌಕರರು ಬಡ್ತಿ ಪಡೆಯದೆ ನಿವೃತ್ತಿಯಾದ ಹಲವು ಪ್ರಕರಣಗಳಿವೆ ಎಂದು ಸಿಎಂ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com