ಕಾವೇರಿ: ಆತ್ಮಹತ್ಯೆ ಬೆದರಿಕೆ ಹಾಕಿದ್ದ ಎಐಎಡಿಎಂಕೆ ಸಂಸದನಿಗೆ ವಿಷ ನೀಡಲು ಮುಂದಾದ ದಿನಕರನ್ ಬೆಂಬಲಿಗ!

ಕಾವೇರಿ ನಿರ್ವಹಣಾ ಮಂಡಳಿ ರಚನೆಯಲ್ಲಿ ಉಂಟಾಗುತ್ತಿರುವ ವಿಳಂಬವನ್ನು ವಿರೋಧಿಸಿ ಆತ್ಮಹತ್ಯೆ ಬೆದರಿಕೆ ಹಾಕಿದ್ದ ಎಐಎಡಿಎಂಕೆ ಸಂಸದ ನವನೀತ್ ಕೃಷ್ಣನ್ ಗೆ ಟಿಟಿವಿ ದಿನಕರನ್ ಬೆಂಬಲಿಗ ವಿಷ ಕೊಡಲು
ಕಾವೇರಿ
ಕಾವೇರಿ
Updated on: 
ಚೆನ್ನೈ: ಕಾವೇರಿ ನಿರ್ವಹಣಾ ಮಂಡಳಿ ರಚನೆಯಲ್ಲಿ ಉಂಟಾಗುತ್ತಿರುವ ವಿಳಂಬವನ್ನು ವಿರೋಧಿಸಿ ಆತ್ಮಹತ್ಯೆ ಬೆದರಿಕೆ ಹಾಕಿದ್ದ ಎಐಎಡಿಎಂಕೆ ಸಂಸದ ನವನೀತ್ ಕೃಷ್ಣನ್ ಗೆ ಟಿಟಿವಿ ದಿನಕರನ್ ಬೆಂಬಲಿಗ ವಿಷ ಕೊಡಲು ಮುಂದಾಗಿದ್ದರು. 
ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನವನೀತ್ ಕೃಷ್ಣನ್ ಸಂಸತ್ ನಲ್ಲಿ ಘೋಷಿಸಿದ್ದರು. ಆದರೆ ಹಾಗೆ ಮಾಡಿಕೊಳ್ಳಲಿಲ್ಲ, ನಾನು ಈಗ ನವನೀತ್ ಕೃಷ್ಣನ್ ಗೆ ಆತ್ಮಹತ್ಯೆಗೆ ಸಹಕಾರಿಯಾಗುವಂತೆ ವಿಷ ಹಾಗೂ ಹಗ್ಗ ಕೊಡುತ್ತಿದ್ದೇನೆ ಎಂದು ದಿನಕರನ್ ಬೆಂಬಲಿಗ ಪುಗಳೆಂದಿ ಹೇಳಿದ್ದಾರೆ. 
ತಮಿಳುನಾಡಿನಲ್ಲಿ ಜಯಲಲಿತಾ ಅವರಂತಹ ಬಲಿಷ್ಠ ನಾಯಕಿಯ ಕೊರತೆ ಉಂಟಾಗಿರುವುದು ಕರ್ನಾಟಕವನ್ನು ಸಂತೋಷಗೊಳಿಸಿದೆ. ಆದ್ದರಿಂದ ತಮಿಳುನಾಡಿನ ಸಂಸದರೆಲ್ಲರೂ ರಾಜೀನಾಮೆ ನೀಡಬೇಕು ಎಂದು ಕರೆ ನೀಡುವುದಾಗಿ ಪುಗಳೆಂದಿ ಹೇಳಿದ್ದಾರೆ. 
ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ಫೆ.16 ರೊಳಗೆ ರಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಆದರೆ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ತಮಿಳುನಾಡು ಸಂಸದ ನವನೀತ್ ಕೃಷ್ಣನ್ ಆತ್ಮಹತ್ಯೆ ಬೆದರಿಕೆ ಹಾಕಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com