ಹಸು ಸಾಕುವ ಉದ್ಯೋಗದ ಬಗ್ಗೆ ತ್ರಿಪುರಾ ಸಿಎಂ ಹೇಳಿಕೆಗೆ ಅಮುಲ್ ಎಂಡಿ ಬೆಂಬಲ!

ಸರ್ಕಾರಿ ಉದ್ಯೋಗಗಳ ಹಿಂದೆ ಓಡುವ ಬದಲು ಪಶುಸಂಗೋಪನೆ (ಹಸುಗಳನ್ನು ಸಾಕುವುದು) ಯ ಉದ್ಯೋಗವನ್ನೂ ಪರಿಗಣಿಸುವಂತೆ ಯುವಕರಿಗೆ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೆಬ್ ಸಲಹೆ ನೀಡಿದ
ಹಸು ಸಾಕುವ ಉದ್ಯೋಗದ ಬಗ್ಗೆ ತ್ರಿಪುರಾ ಸಿಎಂ ಹೇಳಿಕೆಗೆ ಅಮುಲ್ ಎಂಡಿ ಬೆಂಬಲ!
ಹಸು ಸಾಕುವ ಉದ್ಯೋಗದ ಬಗ್ಗೆ ತ್ರಿಪುರಾ ಸಿಎಂ ಹೇಳಿಕೆಗೆ ಅಮುಲ್ ಎಂಡಿ ಬೆಂಬಲ!
ಅಹಮದಾಬಾದ್: ಸರ್ಕಾರಿ ಉದ್ಯೋಗಗಳ ಹಿಂದೆ ಓಡುವ ಬದಲು ಪಶುಸಂಗೋಪನೆ (ಹಸುಗಳನ್ನು ಸಾಕುವುದು) ಯ ಉದ್ಯೋಗವನ್ನೂ ಪರಿಗಣಿಸುವಂತೆ ಯುವಕರಿಗೆ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೆಬ್ ಸಲಹೆ ನೀಡಿದ ಬೆನ್ನಲ್ಲೇ ಗುಜರಾತ್ ನ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (ಜಿಸಿಎಂಎಂಎಫ್) ಅಮೂಲ್ ಎಂಡಿ ತ್ರಿಪುರ ಮುಖ್ಯಮಂತ್ರಿ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ. 
ತ್ರಿಪುರಾ ಮುಖ್ಯಮಂತ್ರಿಗಳ ಸಲಹೆ ನಿರುದ್ಯೋಗ ಸಮಸ್ಯೆಯನ್ನು ತೊಲಗಿಸುವುದಕ್ಕೆ ಇರುವ ಪ್ರಾಕ್ಟಿಕಲ್ ಸಲಹೆ ಎಂದು ಹೇಳಿದ್ದಾರೆ. ಜಿಸಿಎಂಎಂಎಫ್ ನ ಎಂಡಿ ಸೋಧಿ ಹಾಲು ಉತ್ಪಾದನೆ  ಅತ್ಯಂತ ಲಾಭದಾಯಕವಾದದ್ದು ಎಂದು ಹೇಳಿದ್ದು. ಅನೇಕ  ವಿದ್ಯಾವಂತ ಯುವಕರಿಗೂ ಆದಾಯ ನೀಡುತ್ತಿದೆ ಎಂದು ಹೇಳಿದ್ದಾರೆ. 
ಜಿಸಿಎಂಎಂಎಫ್ ಭಾರತದ ಅತಿ ದೊಡ್ಡ ಆಹಾರ ಉತ್ಪನ್ನ ಮಾರುಕಟ್ಟೆ ಸಂಸ್ಥೆಯಾಗಿದ್ದು, 40,000 ಕೋಟಿ ರೂಪಾಯಿ ಆದಾಯ ಹೊಂದಿದೆ.  ಸರ್ಕಾರಿ ಉದ್ಯೋಗಕ್ಕಾಗಿಯೇ ಕಾಯುವ ಯುವಕರಿಗೆ ಕಿವಿಮಾತು ಹೇಳಿದ್ದ ತ್ರಿಪುರಾ ಸಿಎಂ, ಸರ್ಕಾರಿ ಉದ್ಯೋಗದ ಹಿಂದೆ ಓಡಬೇಡಿ, ಬದಲಾಗಿ ಪಶುಸಂಗೋಪನೆ (ಹಸುಗಳನ್ನು ಸಾಕುವುದು) ಯ ಉದ್ಯೋಗವನ್ನೂ ಪರಿಗಣಿಸಿ ಎಂದು ಸಲಹೆ ನೀಡಿದ್ದರು. ಮುಖ್ಯಮಂತ್ರಿಗಳ ಈ ಸಲಹೆಗೆ ತೀವ್ರ ವಿರೋಧ, ಟೀಕೆ ವ್ಯಕ್ತವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com