ನವದೆಹಲಿ: ಕೇಂದ್ರ ರೇಲ್ವೆ ಸಚಿವ ಪಿಯೂಷ್ ಗೋಯೆಲ್ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರಿಸಿದ್ದಾರೆ.
ಖಾಸಗಿ ಕಂಪನಿಯಂದಕ್ಕೆ ಶೇರುಗಳನ್ನು ಮಾರಾಟ ಮಾಡಿದ್ದು, ಅದು ಮುಖ ಬೆಲೆಗಿಂತ 1ಸಾವಿರ ಪಟ್ಟು ಹೆಚ್ಚಿನ ಮೌಲ್ಯವುಳ್ಳದ್ದಾಗಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ ಇದಕ್ಕೆ ಸಂಬಂಧಿಸಿದ ದಾಖಲೆಗಳು ಟೇಬಲ್ ಮೇಲಿವೆ ಎಂದು ಹೇಳಿದ್ದಾರೆ.
ಮಾಧ್ಯಮಗಳ ವಿರುದ್ಧ ಹರಿಹಾಯ್ದಿರುವ ರಾಹುಲ್ ಗಾಂಧಿ ಮಾಧ್ಯಮಗಳು ಗೋಯೆಲ್ ಪರ ವರದಿ ಮಾಡಿ ಪಕ್ಷಪಾತ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
ಮಾದ್ಯಮಗಳು ಸತ್ಯಕಥೆಯನ್ನು ತಿಳಿಯುತ್ತಿಲ್ಲ, ಪತ್ರಕರ್ತರು ಸತ್ಯದ ಪರ ನಿಲ್ಲದೇ ಇರುವುದು ನಮ್ಮ ದೇಶದ ದುರಂತವಾಗಿದೆ ಎಂದು. ಮಾತನಾಡುವ ಅಗತ್ಯವಿಲ್ಲ, ಗೋಯಲ್ ರಾಜಿನಾಮೆ ನೀಡಬೇಕು ಎಂದು ಹೇಳಿದ್ದಾರೆ.