ನರೇಂದ್ರ ಮೋದಿ-ರಾಹುಲ್ ಗಾಂಧಿ
ದೇಶ
ಚೀಟಿ ಇಲ್ಲದೆ 15 ನಿಮಿಷ ಭಾಷಣ ಮಾಡುವ ಪ್ರಧಾನಿ ಮೋದಿ ಸವಾಲು ಸ್ವೀಕರಿಸಿ: ರಾಹುಲ್‍ಗೆ ಒಮರ್
ಚೀಟಿ ಹಿಡಿದುಕೊಳ್ಳದೆ ಕಾಂಗ್ರೆಸ್ ಸರ್ಕಾರ ಮಾಡಿರುವ ಸಾಧನೆ ಬಗ್ಗೆ 15 ನಿಮಿಷ ಭಾಷಣ ಮಾಡಲಿ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಸವಾಲು ಸ್ವೀಕರಿಸುವಂತೆ...
ನವದೆಹಲಿ: ಚೀಟಿ ಹಿಡಿದುಕೊಳ್ಳದೆ ಕಾಂಗ್ರೆಸ್ ಸರ್ಕಾರ ಮಾಡಿರುವ ಸಾಧನೆ ಬಗ್ಗೆ 15 ನಿಮಿಷ ಭಾಷಣ ಮಾಡಲಿ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಸವಾಲು ಸ್ವೀಕರಿಸುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಲಹೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಸಾಧನೆ ಬಗ್ಗೆ ಕರ್ನಾಟಕದಲ್ಲಿ 15 ನಿಮಿಷ ಚೀಟಿ ಹಿಡಿದುಕೊಳ್ಳದೇ ನಿಮಗೆ ತಿಳಿದಿರುವ ಹಿಂದಿ, ಇಂಗ್ಲಿಷ್ ಅಥವಾ ಯಾವುದೇ ಭಾಷೆಯಲ್ಲಿ ಬೇಕಿದ್ದರೆ ನಿಮ್ಮ ತಾಯಿ ಸೋನಿಯಾ ಗಾಂಧಿ ಅವರ ಮಾತೃ ಭಾಷೆಯಲ್ಲಾದರೂ ಸರಿ ಹದಿನೈದು ನಿಮಿಷಗಳ ಮಾತನಾಡಿ ತೋರಿಸಿ, ಆಗಲೇ ಕರ್ನಾಟಕದ ಜನರು ನಿಮ್ಮ ಬಗ್ಗೆ ಒಂದು ಅಭಿಪ್ರಾಯಕ್ಕೆ ಬರುತ್ತಾರೆ ಎಂದು ಮೋದಿ ಅವರು ರಾಹುಲ್ ಗಾಂಧಿಗೆ ಸವಾಲು ಒಡ್ಡಿದ್ದರು.
ಪ್ರಧಾನಿ ಮೋದಿ ಅವರ ಸವಾಲನ್ನು ನೀವು ಸ್ವೀಕರಿಸಿದರೆ ಅನಂತರದಲ್ಲಿ ನಾವು ಎಂಟು ವರ್ಷದ ಬಾಲಕಿ ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಯಾಕೆ ಒಂದು ಸಣ್ಣ ಘಟನೆ ಎಂಬ ಬಗ್ಗೆ ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಬಹುದಾಗಿದೆ ಎಂದು ಒಮರ್ ಅಬ್ದುಲ್ಲಾ ರಾಹುಲ್ ಗೆ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ಮೋದಿ ಅವರು ರಾಹುಲ್ ಗಾಂಧಿಗೆ ಬಹಿರಂಗ ಸವಾಲು ಒಡ್ಡಿದ್ದರು.

